
ಕಾರ್ಕಳ:ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ, ಹೆಚ್ ಆರ್ ಡಿ ಮತ್ತು ಪ್ಲೇಸ್ಮೆಂಟ್ ಸೆಲ್ ಇದರ ವತಿಯಿಂದ ಕಾಲೇಜಿನ ಅಂತಿಮ ಬಿ. ಕಾಂ. ಹಾಗೂ ಅಂತಿಮ ಬಿ.ಬಿ.ಎ.ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯಗಳ ಕುರಿತಾಗಿ ತರಬೇತಿ ಕಾರ್ಯಾಗಾರವು ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮ್ಯಾಜಿಕ್ ಬಸ್ ಇಂಡಿಯನ್ ಫೌಂಡೇಶನ್ ಟ್ರೈನಿಂಗ್ ಆಫೀಸರ್ ಶೋಧನಾ ಅವಿನಾಶ್ ಉಪಾಧ್ಯಾಯ ಇವರು ಮಾತನಾಡುತ್ತ,
ವಿದ್ಯೆಯು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಹಂತಕ್ಕೆ ಕೊಂಡೊಯ್ಯುತ್ತದೆ. ಉದ್ಯೋಗಕ್ಕೆ ಸೇರುವಾಗ ಮಾತೇ ಬಂಡವಾಳವಾಗುತ್ತದೆ. ಭಾಷೆಯು ಮಾತಿನ ಕೌಶಲ್ಯವನ್ನು ಹೆಚ್ಚು ಸುಧಾರಿಸುವಂತೆ ಮಾಡುತ್ತದೆ. ಹಲವಾರು ಭಾಷೆಗಳು ಗೊತ್ತಿದ್ದಾಗ ಹೆಚ್ಚು ಕಡೆ ಉದ್ಯೋಗವನ್ನು ಸಂದರ್ಶಿಸಲು ಸಹಾಯವಾಗುತ್ತದೆ. ಆ ಕೌಶಲವನ್ನು ಸಾಧಿಸುವ ಸಲುವಾಗಿಯೇ ಇಂತಹ ತರಬೇತಿಗಳಿಗೆ ವಿದ್ಯಾರ್ಥಿಗಳು ಸೇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಅವರು, ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ನಮ್ಮನ್ನು ನಾವು ತಂತ್ರಜ್ಞಾನ ಯುಗಕ್ಕೆ ತೊಡಗಿಸಿಕೊಳ್ಳಬೇಕಾದುದು ಅತೀ ಅಗತ್ಯವಾಗಿದೆ. ಚೆನ್ನಾಗಿ ಓದುವುದರ ಜೊತೆಗೆ ಕೌಶಲ್ಯಗಳನ್ನೂ ಅರಿಯುವ, ಕಲಿತುಕೊಳ್ಳುವ ಪ್ರಯತ್ನವನ್ನು ಎಲ್ಲ ವಿದ್ಯಾರ್ಥಿಗಳೂ ಮಾಡಬೇಕು. ಕಾಲೇಜು ಕೊಟ್ಟಿರುವ ಅವಕಾಶವನ್ನು ಈ ಹಂತದಲ್ಲಿಯೇ ಸದುಪಯೋಗಪಡಿಸಿಕೊಳ್ಳಬೇಕು. ಉದ್ಯೋಗಕ್ಕೆ ಸೇರಿ ಅಧಿಕಾರದಲ್ಲಿದ್ದರೂ ಮನುಷ್ಯತ್ವವನ್ನು ಮರೆಯದೆ ವಿದ್ಯಾರ್ಥಿಗಳು ಬದುಕುವುದನ್ನು ಕಲಿಯಬೇಕು ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮ್ಯಾಜಿಕ್ ಬಸ್ ಇಂಡಿಯನ್ ಫೌಂಡೇಶನ್ ಟ್ರೈನಿಂಗ್ ಆಫೀಸರ್ ಶೋಧನಾ ಅವಿನಾಶ್ ಉಪಾಧ್ಯಾಯ ಇವರು ಅಂತಿಮ ಬಿ. ಕಾಂ., ಬಿ. ಬಿ. ಎ.ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲಗಳ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ. ಎಸ್., ಕಾರ್ಯಕ್ರಮ ಸಂಯೋಜಕರಾದ ಶ್ರೀಯುತ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
ಹೆಚ್. ಆರ್. ಡಿ. ಮತ್ತು ಪ್ಲೇಸ್ಮೆಂಟ್ ಸೆಲ್ ನ ಕಾರ್ಯದರ್ಶಿ ಪವನ್ ದೇವಾಗಿಗ ಸ್ವಾಗತಿಸಿದರು.
ವಿದ್ಯಾರ್ಥಿನಿ ಅದಿತಿ ಡಿ. ಕಾರ್ಯಕ್ರಮ ನಿರೂಪಿಸಿದರು. ವಿಪುಲ ಜೈನ್ ಧನ್ಯವಾದ ಸಮರ್ಪಿಸಿದರು.






















































































