27.7 C
Udupi
Sunday, August 23, 2026
spot_img
spot_img
HomeBlogಸೆ.1ರಿಂದ ಹೊಸ ನಿಯಮ: ಅಂತಾರಾಷ್ಟ್ರೀಯ ಪ್ರಯಾಣಿಕರ ಬೋರ್ಡಿಂಗ್ ಪಾಸ್‌ಗೆ ಇಮಿಗ್ರೇಷನ್ ಸೀಲು ಕಡ್ಡಾಯವಿಲ್ಲ

ಸೆ.1ರಿಂದ ಹೊಸ ನಿಯಮ: ಅಂತಾರಾಷ್ಟ್ರೀಯ ಪ್ರಯಾಣಿಕರ ಬೋರ್ಡಿಂಗ್ ಪಾಸ್‌ಗೆ ಇಮಿಗ್ರೇಷನ್ ಸೀಲು ಕಡ್ಡಾಯವಿಲ್ಲ

ನವದೆಹಲಿ: ಸೆಪ್ಟೆಂಬರ್ 1ರಿಂದ ಭಾರತದಿಂದ ವಿದೇಶಗಳಿಗೆ ತೆರಳುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇಮಿಗ್ರೇಷನ್ ಕೌಂಟರ್‌ನಲ್ಲಿ ಭೌತಿಕ ಬೋರ್ಡಿಂಗ್ ಪಾಸ್ ನೀಡುವುದು ಮತ್ತು ಅದರ ಮೇಲೆ ಸೀಲು ಹಾಕಿಸಿಕೊಳ್ಳುವುದು ಕಡ್ಡಾಯವಾಗಿರುವುದಿಲ್ಲ. ದೇಶದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಹೊಸ ನಿಯಮ ಜಾರಿಗೆ ಬರಲಿದೆ.

ಬ್ಯೂರೋ ಆಫ್ ಇಮಿಗ್ರೇಷನ್ ಈ ಬದಲಾವಣೆಯ ಕುರಿತು ವಿಮಾನ ನಿಲ್ದಾಣಗಳ ನಿರ್ವಾಹಕರು, ಸಿಐಎಸ್‌ಎಫ್ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ನೀಡಿದೆ. ನಿಯಮ ಜಾರಿಗೆ ಬರುವ ಮುನ್ನ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಈ ಕುರಿತು ಅರಿವು ಮೂಡಿಸುವಂತೆ ಸೂಚಿಸಲಾಗಿದೆ.

ಈವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್‌ನಲ್ಲಿ ಬೋರ್ಡಿಂಗ್ ಪಾಸ್ ತೋರಿಸಿ ಅಧಿಕಾರಿಗಳಿಂದ ಸೀಲು ಹಾಕಿಸಿಕೊಳ್ಳಬೇಕಿತ್ತು. ಆದರೆ ಸೆಪ್ಟೆಂಬರ್ 1ರಿಂದ ಈ ಕಡ್ಡಾಯ ಪ್ರಕ್ರಿಯೆ ಇರುವುದಿಲ್ಲ.

ಪ್ರಯಾಣಿಕರು ಇಮಿಗ್ರೇಷನ್ ಪರಿಶೀಲನೆ ವೇಳೆ ತಮ್ಮ ಮೊಬೈಲ್‌ನಲ್ಲಿರುವ ಡಿಜಿಟಲ್ ಇ-ಬೋರ್ಡಿಂಗ್ ಪಾಸ್ ತೋರಿಸಬಹುದು. ಮುದ್ರಿತ ಬೋರ್ಡಿಂಗ್ ಪಾಸ್ ಬಳಸುವವರಿಗೂ ಅವಕಾಶವಿದ್ದು, ಅದರ ಮೇಲೆ ಇನ್ನು ಮುಂದೆ ಇಮಿಗ್ರೇಷನ್ ಅಧಿಕಾರಿಗಳು ಸೀಲು ಹಾಕುವುದಿಲ್ಲ.

ಭೌತಿಕ ಬೋರ್ಡಿಂಗ್ ಪಾಸ್ ಕಡ್ಡಾಯವಾಗಿದ್ದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು. ಅಲ್ಲದೆ ಸ್ಪಷ್ಟವಾಗಿ ಬೀಳದ ಸೀಲುಗಳಿಂದ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡುವಾಗ ತಾಂತ್ರಿಕ ಸಮಸ್ಯೆಗಳೂ ಎದುರಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಸರಳಗೊಳಿಸಲು ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಹೀಗಾಗಿ ಸೆಪ್ಟೆಂಬರ್ 1ರಿಂದ ಪ್ರಯಾಣಿಕರು ಡಿಜಿಟಲ್ ಅಥವಾ ಭೌತಿಕ ಬೋರ್ಡಿಂಗ್ ಪಾಸ್‌ಗಳಲ್ಲಿ ಯಾವುದನ್ನಾದರೂ ಬಳಸಬಹುದು. ಎರಡೂ ಮಾದರಿಗಳನ್ನು ಸ್ವೀಕರಿಸಲಾಗುತ್ತದೆ. ಆದರೆ ಇಮಿಗ್ರೇಷನ್ ಕೌಂಟರ್‌ನಲ್ಲಿ ಸೀಲು ಹಾಕಿಸಿಕೊಳ್ಳುವ ಕಡ್ಡಾಯ ಮಾತ್ರ ಇರುವುದಿಲ್ಲ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page