ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ,34ನೇ ವರ್ಷದ ಮೊಸರು ಕುಡಿಕೆ

ಸಂತೋಷ್ ಫ್ರೆಂಡ್ಸ್ ಕ್ಲಬ್ (ರಿ), ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರೆರಿ ಮತ್ತು ಪ್ರೀತಿ ಮಹಿಳಾ ಸಮಾಜ(ರಿ) ಪಾವಳ ವರ್ಕಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 34ನೇ ವರ್ಷದ ಮೊಸರು ಕುಡಿಕೆ ಮಹೋತ್ಸವ ಸೆಪ್ಟೆಂಬರ್ 5 ಶನಿವಾರ ಸಂತೋಷ್ ಫ್ರೆಂಡ್ಸ್ ಕ್ಲಬ್ ಪಾವಳದಲ್ಲಿ ನಡೆಯಲಿದೆ.
ಬೆಳಿಗ್ಗೆ 9ರಿಂದ ವಿವಿಧ ಆಟೋಟ ಸ್ಪರ್ಧೆಗಳು,ಸಂಜೆ 5.30ಕ್ಕೆ ವಿಶೇಷ ಅತಿಥಿಗಳ ಉಪಸ್ಥಿತಿಯೊಂದಿಗೆ ಸಭಾ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ ಮತ್ತು ಚೇತನ್ ವರ್ಕಾಡಿ ಬರೆದಿರುವ “ತಿಂಗೊಲ್ದ ಬಾಲೆಗ್ ಬಂಗಾರ್‌ದ ಬೊಲ್ಪು ” ತುಳು ಎದುರುಕತೆಕ್ಲೆ ಗೊಂಚಿಲ್ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ “ಪರಾ….ಬೇರ್ ಕಿರುನಾಟಕ ಮತ್ತು ಸಂತೋಷ್ ಕಲಾವಿದೆರ್ ಪಾವಳ ತಂಡದಿಂದ “ಇತ್ತೆ ಗೊತ್ತಾಂಡಾ….?” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.



















































































