
ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಗೋಮಾತೆಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತಾಯಿ, ಸಮೃದ್ಧಿ, ಕರುಣೆ ಮತ್ತು ಧರ್ಮದ ಸಂಕೇತವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾದಿಂದ ಅಧ್ಯಕ್ಷರಾದ ಶ್ರೀಮತಿ ವಿನಯಾ ಡಿ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳದ ಶ್ರೀ ವೆಂಕಟರಮಣ ಗೋಶಾಲೆಯಲ್ಲಿ ಗೋವುಗಳಿಗೆ ಆರತಿ ಬೆಳಗಿ, ದೋಸೆ, ಬಾಳೆಹಣ್ಣು, ಕಡುಬು, ಪಂಚಕಜ್ಜಾಯ, ಹಿಂಡಿ ಇತ್ಯಾದಿ ಆಹಾರಗಳನ್ನು ನೀಡಿ ಕಿರು ಕಾಣಿಕೆ ಸಮರ್ಪಿಸಿ ಭಕ್ತಿ ಶ್ರದ್ಧೆಯಿಂದ ಗೋಪೂಜೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರವೀಂದ್ರ ಕುಮಾರ್, ಶೋಭಾ ಭಾಸ್ಕರ್, ಜ್ಯೋತಿ ರಮೇಶ್, ವಿದ್ಯಾ ಪೈ, ವಿನುತ ಆಚಾರ್ಯ, ಪಲ್ಲವಿ ಪ್ರವೀಣ್, ಭಾರತಿ ಅಮೀನ್, ಲಕ್ಷ್ಮೀ ಕಿಣಿ, ಮಮತಾ ಸುವರ್ಣ, ಪ್ರಮೀಳಾ ದಿನೇಶ್, ದೀಪಾ ನಾಯಕ್,ಬೇಬಿ ಮತ್ತಿತರರು ಉಪಸ್ಥಿತರಿದ್ದರು























































































