
ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ, ಕಾರ್ಕಳ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಇದರ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ತಾ.04-10-2026ನೇ ರವಿವಾರ ಬೆಳಿಗ್ಗೆ 9.00ಗಂಟೆಯಿಂದ ವಿವಿಧ ಸ್ಪರ್ಧೆಗಳನ್ನು ಸ್ವಸಮಾಜ ಬಾಂಧವರಿಗೆ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ – ಫಲವಸ್ತು ಚಿತ್ರ ಬಿಡಿಸಲು ಮತ್ತು ಒಂದು ನಿಮಿಷ ಸ್ಪರ್ಧೆ, ಎರಡರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ವಿಷಯ ಮನೆ, ತೆಂಗಿನಮರ ಹಾಗೂ ಭಕ್ತಿಗೀತೆ ಸ್ಪರ್ಧೆ, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ – ಯಕ್ಷಗಾನ ವೇಷ, ಭಾವ ಗೀತೆ/ಜಾನಪದ ಗೀತೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಚಿತ್ರಕಲೆ – ಶ್ರೀ ವಿಶ್ವಕರ್ಮ ಮತ್ತು ಭಾವ ಗೀತೆ/ಜಾನಪದ ಗೀತೆ ಮಹಿಳೆಯರಿಗೆ ಶ್ರೀ ಕಾಳಿಕಾಂಬಾ ಸ್ತೋತ್ರ ಪಠಣೆ, ರಂಗೋಲಿ ಸ್ಪರ್ಧೆ (ಹೂವಿನಿಂದ) ಸ್ಪರ್ಧಾಳುಗಳು ಪರಿಕರಗಳನ್ನು ತಾವೇ ತರಬೇಕು. ಬೆಂಕಿ ಇಲ್ಲದೆ ಅಡುಗೆ ಸ್ಪರ್ಧೆ: ಸ್ಪರ್ಧಾಳುಗಳು ಸಾಮಾಗ್ರಿಗಳನ್ನು ತಾವೇ ತರಬೇಕು. ಸ್ಥಳದಲ್ಲಿ ತಯಾರಿಸಬೇಕು. ಪುರುಷರಿಗೆ ಒಂದು ನಿಮಿಷದ ಸ್ಪರ್ಧೆ, ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನೋಂದಾವಣೆಗಾಗಿ 9036860635, 9844994890 ಸಂಪರ್ಕ ಮಾಡಬೇಕಾಗಿ ವಿನಂತಿಸಲಾಗಿದೆ.
































































































































