
ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ‘ಮುಂದಿನ ಜನ್ಮದಲ್ಲಿ ದಲಿತರ ಮನೆಯಲ್ಲಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸುತ್ತೇನೆ’ ಎಂದು ಹೇಳಿದ್ದಾರೆ.
‘ಇತರರಿಗೆ ಮುಂದಿನ ಚುನಾವಣೆ ಮುಖ್ಯವಾಗಿರಬಹುದು. ಆದರೆ ನನಗೆ ಮುಂದಿನ ಪೀಳಿಗೆಯ ಭವಿಷ್ಯ ಮುಖ್ಯವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ನನ್ನ ಪಾಲಿನ ದೇವರು. ನಾನು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದು ಕೂಡ ಅವರ ಹೆಸರಿನಲ್ಲೇ’ ಎಂದು ಹೇಳಿದ ಪ್ರದೀಪ್ ಈಶ್ವರ್ ‘ಮುಂದಿನ ಜನ್ಮ ಎಂಬುದು ಇದ್ದರೆ ನಾನು ದಲಿತರ ಮನೆಯಲ್ಲಿ ಹುಟ್ಟಬೇಕು ಎಂದು ಬೇಡಿಕೊಳ್ಳುತ್ತೇನೆ, ಒಬಿಸಿಯಲ್ಲಿ ಹುಟ್ಟಿ ದಲಿತರ ಪರ ಇಷ್ಟು ಫೈಟ್ ಮಾಡ್ತಿದ್ದೀನಿ. ದಲಿತನಾಗಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸ್ತೀನಿ’ ಎಂದಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿನ ಟೀಕೆ ಹಾಗೂ ಕಾಮೆಂಟ್ಗಳ ಬಗ್ಗೆಯೂ ಮಾತನಾಡಿದ ಅವರು, ‘ನಾನು ಬೈಯುತ್ತೇನೆ ಅಷ್ಟೇ, ಅವರು ಮತ್ತೆ ಏನು ಬೈದಿದ್ದಾರೆ ಎಂದು ನೋಡುವುದಿಲ್ಲ. ಕಾಮೆಂಟ್ಸ್ ಸೆಕ್ಷನ್ಗೆ ಹೋಗುವುದಿಲ್ಲ, ನನ್ನ ವಿಡಿಯೋಗಳನ್ನೂ ವೀಕ್ಷಿಸುವುದಿಲ್ಲ. ಹೀಗಾಗಿಯೇ ನಾನು ಆರಾಮಾಗಿದ್ದೇನೆ’ ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.






















