30.2 C
Udupi
Sunday, October 4, 2026
spot_img
spot_img
HomeBlogರೈತ ಯುವಕರಿಗೆ ವಧು ಹುಡುಕಲು ವಿಶೇಷ ಯೋಜನೆ ರೂಪಿಸುವಂತೆ ಸಿಎಂಗೆ ರೈತನ ಮನವಿ

ರೈತ ಯುವಕರಿಗೆ ವಧು ಹುಡುಕಲು ವಿಶೇಷ ಯೋಜನೆ ರೂಪಿಸುವಂತೆ ಸಿಎಂಗೆ ರೈತನ ಮನವಿ

ಮೈಸೂರು: ರೈತ ಯುವಕರಿಗೆ ವಧು ಹುಡುಕಲು ನೆರವಾಗುವಂತೆ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಬೇಕು ಎಂದು ರೈತರೊಬ್ಬರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಘಟನೆ ಇದೀಗ ಗಮನ ಸೆಳೆದಿದೆ.

ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ರೈತ, ಗ್ರಾಮೀಣ ಭಾಗದಲ್ಲಿ 35ರಿಂದ 40 ವರ್ಷ ವಯಸ್ಸಿನ ಅನೇಕ ಯುವಕರು ಮದುವೆಯಾಗದೆ ಉಳಿದಿದ್ದಾರೆ. ಸೂಕ್ತ ವಧು ಸಿಗದೆ ಹಲವರು ಮಾನಸಿಕವಾಗಿ ಕುಗ್ಗಿದ್ದು, ಕೆಲವು ಕುಟುಂಬಗಳು ಇದೇ ಚಿಂತೆಯಲ್ಲಿ ನಲುಗುತ್ತಿವೆ ಎಂದು ಸಮಸ್ಯೆಯನ್ನು ವಿವರಿಸಿದರು.

ರೈತ ಯುವಕರು ಮದುವೆಯಾಗಲು ಹೆಣ್ಣು ಹುಡುಕುವ ಸಲುವಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಮನೆ, ಜಮೀನು ಸೇರಿದಂತೆ ಆಸ್ತಿಪಾಸ್ತಿ ಹೊಂದಿದ್ದರೂ ಕೃಷಿಯನ್ನು ನಂಬಿ ಬದುಕುವ ಯುವಕರಿಗೆ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಕರ್ನಾಟಕದಾದ್ಯಂತ ವ್ಯಾಪಕವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

‘ಇದನ್ನು ತಮಾಷೆಯಾಗಿ ಪರಿಗಣಿಸಬೇಡಿ’

ಇದು ಕೇವಲ ಹಾಸ್ಯದ ವಿಷಯವಲ್ಲ, ಸಾವಿರಾರು ರೈತ ಯುವಕರ ಬದುಕಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ಮದುವೆಯಾಗದೆ ಹತಾಶರಾಗಿರುವ ಯುವಕರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಯೊಂದನ್ನು ರೂಪಿಸಬೇಕು. ಇದರಿಂದ ಲಕ್ಷಾಂತರ ಯುವಕರಿಗೆ ಅನುಕೂಲವಾಗಲಿದೆ ಎಂದು ರೈತ ಒತ್ತಾಯಿಸಿದರು.

ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ರೈತನ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಸಾಮಾಜಿಕ ಸಮಸ್ಯೆ ಎಂಬುದನ್ನು ಒಪ್ಪಿಕೊಂಡರು. ಬಳಿಕ ಯುವಕನ ಮನವಿಗೆ ಪ್ರತಿಕ್ರಿಯಿಸಿದ ಅವರು, “ನಿನ್ನ ಹೆಸರಲ್ಲೇ ಯೋಜನೆ ತರೋಣ ಹೋಗು” ಎಂದು ಉತ್ತರಿಸಿದರು. ಮುಖ್ಯಮಂತ್ರಿಗಳ ಈ ಮಾತು ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page