
ದಿನಾಂಕ 29/8/2026 ರಂದು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ
ಇಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ, ೨೦೨೬-೨೭ನೇ ಸಾಲಿನ ಕ್ರೀಡಾ ಸಂಘದ ಉದ್ಘಾಟನೆ
ಹಾಗೂ ಕಾಲೇಜಿನ ಕ್ರೀಡಾ ಪ್ರತಿಭೆಗಳ ಸನ್ಮಾನ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಜೈನ್
ಪದವಿ ಪೂರ್ವ ಕಾಲೇಜು ಮೂಡಬಿದ್ರೆ ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಹೆಗ್ಡೆ ಇವರು
ತಮ್ಮ ಉದ್ಘಾಟನಾ ಭಾಷಣದಲ್ಲಿ ಮೇಜರ್ ಧ್ಯಾನಚಂದ್ ಇವರ ಅಪ್ರತಿಮ ದೇಶಭಕ್ತಿ ಹಾಗೂ
ಕ್ರೀಡೆಯಲ್ಲಿನ ವಿಶೇಷ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿಯನ್ನು ನೀಡಿದರು.
೨೦೨೫-೨೬ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ವಿವಿಧ ಕ್ರೀಡೆಗಳಲ್ಲಿ ಅಂತರ್
ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಾದ
ಪೂಜಾ, ಶೋಭಿತಾ, ಶಮಿತ್, ಮಹಮ್ಮದ್ ಹಫೀಜ಼್, ಶರಣ್ಯಾ ಪುತ್ರಾಯ, ದೀಪಿಕಾ, ಸಿಂಚಿತಾ ಈ
ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ.ಕೆ
ಇವರು ಶೈಕ್ಷಣಿಕ ಸಾಧನೆಯೊಂದಿಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೆಚ್ಚಿನ
ಸಾಧನೆಯನ್ನು ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತೆ
ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಇವರ ಈ ಅರ್ಥಪೂರ್ಣ ಜನ್ಮದಿನ ನೆನಪಿನ ರಾಷ್ಟ್ರೀಯ
ಕ್ರೀಡಾ ದಿನಾಚರಣೆ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ
ಡಾ.ಚಂದ್ರಾವತಿ, ಶ್ರೀಮತಿ ಜ್ಯೋತಿ ಜನ್ನೆ, ಐಕ್ಯೂಎಸಿ ಸಂಚಾಲಕರಾದ ಶ್ರೀ ವಿನಯ್ .ಎಮ್.ಎಸ್,
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಜಯಭಾರತಿ.ಎ, ಕ್ರೀಡಾ ಕಾರ್ಯದರ್ಶಿಗಳಾದ ಸುಶಾರ್. ಶ್ರೇಯಸ್,
ಸಿಂಚಿತಾ ಇವರುಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಜಯಭಾರತಿ.ಎ ಇವರು ಸ್ವಾಗತ, ಅಜಯ್ ಇವರು ಅತಿಥಿ ಪರಿಚಯ,
ಸಿಂಚಿತಾ ವಂದನಾರ್ಪಣೆಯನ್ನು ಮಾಡಿದರೆ ಅನನ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.






















































































