23.3 C
Udupi
Monday, September 28, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 654

ಭರತೇಶ ಶೆಟ್ಟಿ,ಎಕ್ಕಾರು

ಅರ್ಜುನನ ಕುತೂಹಲವನ್ನು ನೋಡಿದ ಗಂಧರ್ವ ಅಂಗಾರಪರ್ಣ ಪ್ರಸ್ತುತ ಇರುವ ಮಹಾನ್ ತಪಸ್ವಿಗಳೂ ಮಹಿಮಾನ್ವಿತರೂ ಆಗಿರುವ ಮಹಾತ್ಮರ ಕುರಿತಾಗಿ ಹೇಳತೊಡಗಿದನು.

“ಹೇ ಪಾರ್ಥಾ! ನೀನು ನಮಗೆ ಒದಗಬಲ್ಲ ಗುರುಗಳು ಯಾರಿದ್ದಾರೆ ಎಂದು ಕೇಳುತ್ತಿರುವೆ. ನಾನು ಈಗಾಗಲೆ ನಿನಗೆ ಕೌಶಿಕ ಹಾಗು ಬ್ರಹ್ಮರ್ಷಿ ವಸಿಷ್ಠರ ಮಧ್ಯೆ ಸಾಗುತ್ತಿದ್ದ ಸಂಘರ್ಷದ ಕುರಿತಾಗಿ ಹೇಳಿದ್ದೇನೆ. ಆದರೆ ಆ ಕೌಶಿಕ ಮಹಾರಾಜನಾಗಿದ್ದು ವಸಿಷ್ಠರ ಬಳಿ ಬಂದು, ಸುರಧೇನುವನ್ನು ಸೆಳೆದು, ನಂತರ ಆಕೆಯ ಬಲದೆದುರು ನಿಲ್ಲಲಾಗದೆ ಓಡಿ ಹೋಗಿ ತಪಸ್ಸನ್ನಾಚರಿಸಿ ಮತ್ತೆ ಮತ್ತೆ ಪ್ರಯತ್ನ ಮಾಡಿದರೂ ಬ್ರಹ್ಮರ್ಷಿ ವಸಿಷ್ಠರ ಶಕ್ತಿಯೆದುರು ತನ್ನ ಮೇಲುಗೈ ಸಾಧಿಸಲಾಗದೆ ಪರಿಭವವನ್ನು ಅನುಭವಿಸುತ್ತಿದ್ದನು‌. ಆದರೂ ಹಠ ಬಿಡದ ಛಲದಂಕ ಮಲ್ಲನಾಗಿ ಘನಘೋರ ತಪಸ್ಸಿಗೆ ತೊಡಗಿದನು. ಹೀಗೆ ಎಷ್ಟೊ ಕಾಲಗಳು ಕಳೆದರೂ ಕೌಶಿಕ ವಿಮುಖನಾಗದೆ ಉಗ್ರ ತಪಸ್ಸನ್ನು ಮುಂದುವರಿಸುತ್ತಿದ್ದನು. ತತ್ಪರಿಣಾಮವಾಗಿ ಎಲ್ಲೆಡೆ ಉರಿ ಏರತೊಡಗಿತು. ತಪೋಜ್ವಾಲೆ ಸುಡತೊಡಗಿತು. ಜನರು, ಖಗ ಮಿಗಗಳು, ತರು ಲತೆಗಳು, ಜಲಚರಗಳು ಹೀಗೆ ಚರಾಚರ (ಚಲಿಸುವ ಮತ್ತು ಚಲಿಸದ) ಜೀವರಾಶಿಗಳೆಲ್ಲ ಸುಟ್ಟು ಹೋಗತೊಡಗಿದವು. ತಪಸ್ಸು ಶ್ರೇಷ್ಠಕರ್ಮ ಆದರೂ ಅದರ ತೀವ್ರತೆ ಲೋಕಕ್ಕೆ ಮಾರಕವಾದಾಗ ದೇವತೆಗಳು ಲೋಕದ ಕ್ಷೇಮದ ಕುರಿತಾಗಿ ಯೋಚಿಸುತ್ತಾರೆ. ದೇವರಾಜ ಇಂದ್ರ ಪರಿಹಾರ ಮಾರ್ಗದ ಕುರಿತು ತರ್ಕಿಸಿ ಸುರನಾರಿ ಮೇನಕೆಯನ್ನು ಕರೆದು ಕೌಶಿಕರ ತಪಸ್ಸನ್ನು ಭಂಗಗೊಳಿಸುವ ಹೊಣೆಗಾರಿಕೆಯನ್ನು ವಹಿಸಿದನು. ಆಕೆಯ ಸಹಾಯಕ್ಕಾಗಿ ಮದನ ಮೋಹನ ಮನ್ಮಥನನ್ನು ಕುಸುಮಾವತಿಯಿಂದ ಅಮರಾವತಿಗೆ ಕರೆಸಿ ಜೊತೆಯಾಗಿಸಿದನು‌. ಕಬ್ಬನ್ನು ಬಗ್ಗಿಸಿ ಬಿಲ್ಲಾಗಿ ಬಿಗಿದು ಧರಿಸಿರುವ ಮನ್ಮಥನ ಬಳಿ ಐದು ಕುಸುಮ ಶರಗಳಿವೆ. ಅರವಿಂದ (ಬಿಳಿ ತಾವರೆ ಹೂವು), ಅಶೋಕ (ಅಶೋಕ ಮರದ ಹೂವು) ಚೂತ (ಮಾವಿನ ಹೂವು), ನವಮಲ್ಲಿಕಾ (ಮಲ್ಲಿಗೆ ಹೂವು) ಮತ್ತು ನೀಲೋತ್ಫಲ (ನೀಲಿ ತಾವರೆ ಹೂವು). ಈ ಐದೂ ಶರಗಳಿಗೆ ಪ್ರತ್ಯೇಕ ಐದು ಗುಣಗಳಿವೆ‌. ಅವುಗಳು ಉನ್ಮಾದ, ತಾಪನ, ಶೋಷಣ, ಸ್ಥಂಭನ, ಮತ್ತು ಸಮ್ಮೋಹನ. ಮನ್ಮಥನ ಬಾಣಗಳಿಗೂ ಯುದ್ಧಶರಗಳಿಗೂ ತದ್ವಿರುದ್ಧ ಗುಣಗಳಿವೆ. ಯುದ್ಧದ ಶರಗಳು ಬಂದು ಚುಚ್ಚಿದರೆ ಒಂದು ಶರೀರ ತುಂಡಾಗಿ ಅಥವಾ ಕತ್ತರಿಸಲ್ಪಟ್ಟು ಎರಡಾಗುತ್ತದೆ. ಆದರೆ ಮನ್ಮಥನ ಕುಸುಮ ಶರಗಳು ಎರಡು ಶರೀರಗಳನ್ನು ಒಂದಾಗಿಸಬಲ್ಲವು. ಇಂತಹ ಮನ್ಮಥನ ಕಾಮಜನಕ ಬಾಣಗಳ ಜೊತೆಗೆ ಮಾರುತನ ಸಹಾಯವನ್ನೂ ಹೊಂದಿಸಿ ಕೊಟ್ಟು ದೇವೇಂದ್ರ ಕೌಶಿಕನ ತಪಸ್ಸನ್ನು ಕೆಡಿಸಲು ಮೇನಕೆಯನ್ನು ಕಳುಹಿಸಿದ್ದನು. ಕೌಶಿಕನು ಪುಷ್ಕರ ಕ್ಷೇತ್ರದಲ್ಲಿ ಕುಳಿತು ತಪೋನಿರತರಾಗಿದ್ದನು. ಅಲ್ಲಿಗೆ ಆಗಮಿಸಿದ ಮೇನಕೆ ಮತ್ತು ಮನ್ಮಥ ಕೌಶಿಕನ ತಪಸ್ಸು ಕೆಡಿಸುವ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಮನ್ಮಥನು ಪಂಚ ಶರಗಳನ್ನು ಪ್ರಕೃತಿ, ಕೌಶಿಕ ಹಾಗು ಮೇನಕೆಯರನ್ನು ಗುರಿಯಾಗಿಸಿ ಪ್ರಯೋಗಿಸಿದ್ದನು. ತಕ್ಷಣ ಎಲ್ಲೆಡೆ ಪರಿವರ್ತನೆಗಳಾದವು. ತಪಸ್ಸಿನಲ್ಲಿ ಲೀನವಾಗಿದ್ದ ಕೌಶಿಕನ ಮನಸ್ಸು ಚಂಚಲವಾಯಿತು. ತನ್ನೊಳಗೆ ವ್ಯಾಪ್ತವಾಗಿರುವ ಪ್ರೀತಿಯನ್ನು ಅದುಮಿಟ್ಟು, ತಾವು ಬೆರೆಯಲಾರದೆ ಚಕ್ರವಾಕಪಕ್ಷಿಗಳು ವಿಶೇಷವಾಗಿ ಬಳಲುತ್ತಿರುವಂತಹ ವೇದನೆ ಕೌಶಿಕನಿಗೂ ಮೇನಕೆಗೂ ಆಗತೊಡಗಿತು. ಪುಷ್ಕರ ಕ್ಷೇತ್ರದಲ್ಲಿ ಅರಳಿದ ತಾವರೆಗಳು ಪೂರಕವಾಗಿ ಸೂರ್ಯನಿಗೆ ಕೈ ಮುಗಿಯುವಂತೆ ಮೊಗ್ಗಾಗಿ ಸೂರ್ಯನತ್ತ ಸೆಳೆತ ಹೊಂದಿದವು. ಮನ್ಮಥನ ಸುಮ ಶರದ ಪರಿಣಾಮವಾಗಿ ಎಲ್ಲೆಡೆ ಕಾರ್ಮೋಡ ಕವಿಯಿತು. ಪ್ರಳಯಕಾಲದ ಮೋಡದ ಸಮೂಹಗಳು ದಿಕ್ಕುಗಳನ್ನೆಲ್ಲ ಕವಿದುಕೊಂಡಿದೆಯೋ, ಅಥವಾ ಈಶ್ವರನು ಮದ್ದಾನೆಯ ಚರ್ಮವನ್ನು ಅಂಬರಕ್ಕೆ ಹರಡಿದ್ದಾನೆಯೋ ಎಂಬಂತೆ ಕತ್ತಲೆ ಆವರಿಸಿತು. ಶೀತಲವೂ, ಸುಗಂಧಭರಿತವೂ ಆದ ಮಂದ ಮಾರುತ ಬೀಸ ತೊಡಗಿದನು. ಗಗನದಲ್ಲಿ ಮೋಡಗಳೆಡೆ ಕಾಮನ ಬಿಲ್ಲು ವರ್ಣರಂಜಿತವಾಗಿ ಶೋಭಿಸುತ್ತಿತ್ತು. ಅದನ್ನು ನೋಡಿ ಗಂಡು ನವಿಲುಗಳು ಜೋಡಿಯಾಗಲು ಉನ್ಮಾದದಿಂದ ಗರಿ ಬಿಚ್ಚಿ ಕುಣಿಯುತ್ತಾ ಹೆಣ್ಣು ನವಿಲುಗಳನ್ನು ಆಕರ್ಷಿಸತೊಡಗಿದವು. ಮದ್ದಾನೆಗಳ ಕಪೋಲ ಸಿಡಿಯ ತೊಡಗಿತ್ತು. ಪರಿಣಾಮ ಮದವೇರಿ ಘೀಳಿಡುತ್ತಾ ಓಡಾಡುತ್ತಿದ್ದವು. ಹಾವುಗಳು ಬುಸುಗುಡುತ್ತಾ ಮೋಳ ಬೆಸೆಯಲು ಹರಿದಾಡತೊಡಗಿದವು. ದುಂಬಿಗಳು ಝೇಂಕರಿಸುತ್ತಾ ಹೂವಿನ ಕೇಸರವನ್ನು ಸ್ಪರ್ಶಿಸಿ ಮಕರಂದ ಹೀರಿ ಇನ್ನೊಂದು ಸುಮದೆಡೆ ಹಾರಿ ಪರಾಗವನ್ನು ಪಸರಿಸತೊಡಗಿದವು. ಜೋಡಿಹಕ್ಕಿಗಳ ಇಂಚರ ಸುರ ಸಂಗೀತದಂತೆ ಮೋಹಕವಾಗಿ ಕೇಳ ತೊಡಗಿತು. ಸರೋವರದಲ್ಲಿದ್ದ ಹಂಸ – ರಾಜಹಂಸ ಸಮೂಹಗಳು ಈಜಾಡುತ್ತಾ ಕೊಕ್ಕು ಕತ್ತುಗಳ ವರಸೆಯಲ್ಲಿ ನಿರತವಾದವು. ಹೀಗೆ ಗುಹೆ ತಪ್ಪಲುಗಳಿಂದ ಹಿಡಿದು, ನದಿಯಾಳದವರೆಗೂ, ಮಹಾವೃಕ್ಷದ ತುದಿಯಿಂದ ಪ್ರಪಾತದ ತಳದವರೆಗೂ ಎಲ್ಲೆಡೆ ಏನೋ ಒಂದು ಪುಳಕವೇರ್ಪಡಲು ತೊಡಗಿತ್ತು. ಹೀಗಿರಲು ಕೌಶಿಕನ ಶರೀರದಲ್ಲೂ ರಕ್ತ ಬಿಸಿಯೇರಿ ರಭಸವಾಗಿ ಹರಿದಾಡತೊಡಗಿತು. ಏಕಾಗ್ರತೆ ನಷ್ಟವಾಯಿತು. ತಪಸ್ಸು ಸಾಧ್ಯವಾಗದೆ ಹೋಯಿತು. ನ್ಯಾಸಗಳಿಸಿರುವ ಆಸೆಗಳು ಗರಿಗೆದರಿ ನರ್ತಿಸತೊಡಗಿದವು. ಬೇಕುಗಳ ದಾಸನಾದ ಮನಸ್ಸು ಗುರಿಯ ಗಮ್ಯವನ್ನು ಮರೆಸಿತು. ತಪಸ್ಸು ಕಷ್ಟವಾಗಿ ತಪೋ ಜ್ವಾಲೆ ಶೀತಲವಾಯಿತು. ಹೀಗಾದಾಗ ಕೌಶಿಕ ಕಣ್ತೆರೆದು ನೋಡಿದರೆ…ಎದುರು ಮೋಹನಾಂಗಿ ಮೇನಕೆ ಕಾಣಿಸಿದಳು. ಆ ರೂಪರಾಶಿ ಕಂತು ಕಬ್ಬಿಲ್ಲಿನಿಂದ ಚಿಮ್ಮಿಸಿದ ಶರಘಾತಕ್ಕೊಳಗಾದ ಕೌಶಿಕನಿಗೆ ಹೇಗೆ ಕಾಣಿಸುತ್ತಿದ್ದಳು ಎಂದರೆ ವರ್ಣಿಸಲಾಗದಷ್ಟು ಚೆಲುವಿನ ಗಣಿ…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page