24.3 C
Udupi
Friday, September 25, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 651

ಭರತೇಶ ಶೆಟ್ಟಿ ,ಎಕ್ಕಾರು

ವಸಿಷ್ಠರ ಆಶೀರ್ವಾದ ಪಡೆದು ಮಹಾರಾಜ ಸೌದಾಸ ಮಾಯಾವಿ ರಾಕ್ಷಸ ಸೋದರನನ್ನು ಹುಡುಕಿ ಆತನ ಮಾಯಾಜಾಲವನ್ನು ಭೇದಿಸಿ ಸಂಹರಿಸಿದನು. ಆತನಿಂದಾಗಿ ಅನುಭವಿಸಿದ ಕಷ್ಟಕ್ಕೆ ಸರಿಯಾದ ಶಿಕ್ಷೆಯನ್ನು, ಭವಿಷ್ಯದಲ್ಲಿ ಆ ರಾಕ್ಷಸನಿಂದ ಸಂಭವಿಸಬಹುದಾದ ವಿಪತ್ತನ್ನು ನಿರ್ನಾಮಗೊಳಿಸಿದನು.

ಆ ಬಳಿಕ ಮರಳಿ ಬಂದ ಸೌದಾಸನು ವಸಿಷ್ಠರಿಗೆ ವಂದಿಸಿ ಹನ್ನೆರಡು ವರ್ಷಗಳ ಕಾಲ ತಾನು ರಾಕ್ಷಸನಾಗಿರುವಾಗ ತನ್ನ ಸಾಮ್ರಾಜ್ಯವನ್ನು ಸಂರಕ್ಷಿಸಿದ ಸೂರ್ಯವಂಶದ ಕುಲಗುರುಗಳಿಗೆ ಕೃತಜ್ಞತಾಪೂರ್ವಕವಾಗಿ ನಮಿಸಿದನು. ದಿನಗಳು ಕಳೆದಾಗ ಸುಮೂಹೂರ್ತದಲ್ಲಿ ಬ್ರಹ್ಮರ್ಷಿ ವಸಿಷ್ಠರ ಮುಖೇನ ಅರ್ಧದಲ್ಲಿ ಸ್ಥಗಿತವಾಗಿದ್ದ ಯಾಗ ಪುನರಾರಂಭವಾಯಿತು. ಅಡಚಣೆಯ ದೋಷ ನಿವಾರಣೆ, ಆಪತ್ತುಗಳ ನಿವಾರಣೆಗಾಗಿ ಶಾಂತಿ ಹೋಮಗಳು, ಪುಣ್ಯ ಬಲವರ್ಧನೆಗಾಗಿ ಸ್ವಸ್ಥ್ಯಯನ, ಪುಣ್ಯಾಹಗಳು ನಡೆದವು. ಯಾಗವೂ ನಿರಾತಂಕವಾಗಿ ನೆರವೇರಿ ಅನ್ನದಾನ, ಭೂದಾನ, ಗೋದಾನ, ಕನಕ, ಧಾನ್ಯ, ವಸ್ತ್ರಾದಿ ದಾನಗಳೂ ನಡೆದವು. ಇದೆಲ್ಲವೂ ನಡೆದ ಕೆಲದಿನಗಳ ಬಳಿಕ ಸೌದಾಸನು ತನ್ನ ಮನದ ದುಗುಡವನ್ನು ಬ್ರಹ್ಮರ್ಷಿ ವಸಿಷ್ಠರಲ್ಲಿ ತೋಡಿಕೊಂಡನು. ಅದೇನೆಂದರೆ ಸಂಸಾರದಲ್ಲಿ ಈ ತನಕ ಸಂತಾನಭಾಗ್ಯ ಪ್ರಾಪ್ತವಾಗಿರಲಿಲ್ಲ. ಆ ಕೊರಗು ದಂಪತಿಗಳನ್ನು ಸುಡುತ್ತಿತ್ತು. ಪರಿಹಾರ ಮಾರ್ಗ ತರ್ಕಿಸಿ ಪುತ್ರಕಾಮೇಷ್ಠಿ ಯಾಗವನ್ನು ವಿರಚಿಸಲು ವಸಿಷ್ಠರು ನಿರ್ದೇಶನ ನೀಡಿದರು. ಅಂತೆಯೆ ಶೃದ್ಧಾಭಕ್ತಿಯಿಂದ ಯಾಗ ವಿರಚಿಸಿ ಪ್ರಸಾದವನ್ನು ಮಹಾರಾಜ ಸೌದಾಸನೂ, ಪತ್ನಿ ಮದಯಂತಿಯೂ ಸ್ವೀಕರಿಸಿದರು. ಇದಾಗಿ ಕೆಲಸಮಯದ ಬಳಿಕ ಶುಭ ಸುದ್ದಿ ರಾಜ್ಯದೆಲ್ಲೆಡೆ ಪಸರಿಸಿತು. ಅದೇನೆಂದರೆ ರಾಣಿ ಗರ್ಭ ಧರಿಸಿದ್ದಳು. ಸಂಭ್ರಮವೇ ಸಂಭ್ರಮ. ಎಲ್ಲೆಡೆ ಸಡಗರ. ಸೀಮಂತಾದಿ ಕರ್ಮಗಳು ಸಕಾಲದಲ್ಲಿ ನೆರವೇರಿ ಯಥೇಚ್ಚವಾಗಿ ದಾನ ಧರ್ಮಾದಿಗಳೂ ನಡೆದವು. ನವ ಮಾಸ ತುಂಬಿದ ಬಳಿಕ ಎಲ್ಲರಲ್ಲೂ ಕಾತರ… ಆದರೆ ತಿಂಗಳು ಹತ್ತಾಯಿತು, ಒಂದು ವರ್ಷವಾಯಿತು, ಎರಡು, ಮೂರು, ಹೀಗೆ ಕಾಲ ಚಕ್ರ ತಿರುಗುತ್ತಾ ಇದೆ. ಯಾಗದ ಮೇಲೆ ವಿಶ್ವಾಸವಿರಿಸಿದ್ದ ರಾಜ ರಾಣಿಯರಿಗೆ ವಸಿಷ್ಠರೂ ತಾಳ್ಮೆಯಿಂದ ಇರುವಂತೆ ಧೈರ್ಯ ತುಂಬುತ್ತಿದ್ದರು. ಆದರೆ ನಾಲ್ಕು ದಾಟಿ ಐದಾಯಿತು ವರ್ಷ. ಆದರೂ ಏನೂ ಫಲವಿಲ್ಲ. ವಿಶ್ವಾಸದ ಬೇರಿಗೆ ಪೆಟ್ಟು ಬೀಳತೊಡಗಿದೆ. ಚಿಂತೆಗೊಳಗಾದರೂ ಅರೆ ಮನಸ್ಸಿನಿಂದ ಮತ್ತೂ ಗರ್ಭ ಧರಿಸಿ, ಮನೋ ವೇದನೆ ಸಹಿಸುತ್ತಾ ಕಾಯುತ್ತಿದ್ದಾಳೆ ಮದಯಂತಿ. ಇನ್ನೇನು ಆಪತ್ತು ಕಾದಿದೆಯೊ? ಯಾಕೆ ಹೀಗಾಗುತ್ತಿದೆ? ಎಂಬ ಭಯ ಮನದಲ್ಲಿ ತುಂಬಿ ತುಳುಕಾಡತೊಡಗಿದೆ. ಹೀಗೆ ದಿನಗಳುರುಳುತ್ತಾ ವರ್ಷ ಏಳಾಯಿತು! ಮದಯಂತಿಯ ತಾಳ್ಮೆಯ ಕಟ್ಟೆ ಒಡೆದು ಹೋಯಿತು. ಇನ್ನು ಕಾಯುವ ಸೈರನೆಯಾಗಲಿ, ವಿಶ್ವಾಸವಾಗಲಿ ಆಕೆಯ ಬಳಿ ಉಳಿದಿಲ್ಲ. ಮನಸ್ಸು ಹದಗೆಡುತ್ತಿದೆ. ಏನು ಮಾಡುವುದೆಂದು ತೋಚುತ್ತಿಲ್ಲ. ಪರಿಚಾರಕಿಯರು ಈಕೆಯ ಅಸಹನೆಯನ್ನು ನೋಡಿ ಅಮ್ಮಾ ಪ್ರಸವ ವೇದನೆಯೇನಾದರು ಬರುತ್ತಿದೆಯೆ ಎಂದು ಪದೇ ಪದೇ ಕೇಳುವಾಗ ಬಾರದೆ ಇರುವ ನೋವನ್ನು ಹೇಗೆ ಹೌದು ಎನ್ನಲಾದೀತು? ಸೇವಕಿಯರಲ್ಲಿ ತನಗಾಗುತ್ತಿರುವ ನಿಜ ನೋವನ್ನು ವಿವರಿಸಿ ಹೇಳಲಾಗುವುದೆ? ಈ ತೊಳಲಾಟದಲ್ಲಿ ಸಿಲುಕಿ ನಲುಗಿ ಹೋದ ಮದಯಂತಿ ಹತಾಶಳಾದಳು. ಹತಾಶೆ ಅತಿರೇಕಕ್ಕೇರಿದಾಗ ಮನಸ್ಸು ನಿಯಂತ್ರಣ ತಪ್ಪಿತು. ಹೊಟ್ಟೆಯನ್ನು ಹಿಸುಕಿ ಎದುರಲ್ಲಿ ಕಾಣಿಸಿದ ಅಶ್ಮ (ಕಲ್ಲು)ವನ್ನು ಕೈಗೆತ್ತಿಕೊಂಡು ತನ್ನ ಹೊಟ್ಟೆಗೆ ಜೋರಾಗಿ ಹೊಡೆದಳು. ಆಕೆಯ ಉದ್ದೇಶ ಪ್ರಸವವಾಗದ ಗರ್ಭ ಪಾತವಾದರು ಆಗಲಿ ಎಂದಿತ್ತೊ ಏನೋ! ಆದರೆ ಪುತ್ರಕಾಮೇಷ್ಠಿ ಯಾಗ ಪ್ರಸಾದದ ಪುಣ್ಯಬಲವುಳ್ಳ ಪಿಂಡವಲ್ಲವೆ? ಮುದ್ದಾದ ಗಂಡುಮಗುವಿನ ಜನನವಾಯಿತು.

ಸಕಾಲದಲ್ಲಿ ಜಾತ ಕರ್ಮಗಳನ್ನು ನೆರವೇರಿಸಿ ಅಶ್ಮಘಾತ ಕಾರಣದಿಂದ ಜನಿಸಿದ ಮಗುವಿಗೆ ಅಶ್ಮಕ ಎಂದು ಹೆಸರಿಟ್ಟರು‌. ಸೌದಾಸನ ಜೀವನದಲ್ಲಿ ಸಂತಾನ ಭಾಗ್ಯವೂ ಪ್ರಾಪ್ತವಾಗಿದೆ. ಕಷ್ಟದ ದಿನಗಳು ಕಳೆದು ವಸಿಷ್ಠರ ಸಂತೋಷದ ಜೀವನ ಆರಂಭವಾಗಿದೆ.

ಇತ್ತ ಮುನಿ ಕೌಶಿಕ ಘನಘೋರ ತಪಸ್ಸನ್ನಾಚರಿಸುತ್ತಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page