
ಕಾರ್ಕಳ, ಸೆ. 21: ಕರ್ನಾಟಕ ಸರ್ಕಾರ, ಉಡುಪಿ ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾದ 2026-27ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವೃತ್ತ/ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಕಾರ್ಕಳದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ಈ ಕ್ರೀಡಾಕೂಟದ ಅಂಡರ್-14 ವಯೋಮಿತಿ ವಿಭಾಗದಲ್ಲಿ ವರ್ಧಮಾನ ವಿದ್ಯಾಸಂಸ್ಥೆ ಕಾರ್ಕಳದ ವಿದ್ಯಾರ್ಥಿನಿಯರಾದ ಫಲಕ್ ಫಾತಿಮಾ(8ನೇ ತರಗತಿ) ಹಾಗೂ ಆಯಿಷಾ ಫಾತಿಮಾ (8ನೇ ತರಗತಿ)
ಹರ್ಡಲ್ಸ್ ಸ್ಪರ್ಧೆಯಲ್ಲಿ ಫಲಕ್ ಫಾತಿಮಾ ದ್ವಿತೀಯ ಸ್ಥಾನ ಪಡೆದುಕೊಂಡರೆ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಆಯಿಷಾ ಫಾತಿಮಾ ದ್ವಿತೀಯ ಸ್ಥಾನ ಗಳಿಸಿ, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ,
ವಿದ್ಯಾರ್ಥಿನಿಯರ ಈ ಸಾಧನೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಸಂದೇಶ್ ರವರನ್ನು ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳದ ಮುಖ್ಯಸ್ಥರಾದ ಕುಮಾರಯ್ಯ ಹೆಗ್ಡೆ ,ಶಶಿಕಲಾ ಕೆ ಹೆಗ್ಡೆ ,ಆಡಳಿತಾಧಿಕಾರಿ ಕರ್ತವ್ಯ ಜೈನ್ , ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಹಂತದ ಕ್ರೀಡಾ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.































































































































