
ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ ಕ್ರೀಡಾಂಗಣದಲ್ಲಿ ಯುವಜನ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ
ಕರ್ನಾಟಕ ಯುವಜನ ಮತ್ತು ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದ ರಾಜ್ಯ ಕಂಬಳ ಅಸೋಸಿಯೇಷನ್ (ರಿ ) ಹಾಗೂ ಜಿಲ್ಲಾ ಕಂಬಳ ಸಮಿತಿ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಕಂಬಳ ಓಟಕ್ಕೆ ಆಯ್ಕೆಗೊಂಡವರ ತರಬೇತಿ ಶಿಬಿರವನ್ನು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಅಧ್ಯಕ್ಷ
ಉದಯ ಕುಮಾರ್ ಶೆಟ್ಟಿ ಮುನಿಯಾಲು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಕಂಬಳ ತುಳುನಾಡಿನ ಸಂಸ್ಕೃತಿಯ ಭಾಗ ತುಳುನಾಡಿನ ಪ್ರಕೃತಿ ಕೂಡ
ಕಂಬಳದ ಅಭಿವೃದ್ಧಿಗೆ ಪೂರಕವಾಗಿದ್ದು ಪ್ರಕೃತಿಯೊಂದಿಗೆ ಸಂಸ್ಕೃತಿಯ ಕೂಡುವಿಕೆ ನಮ್ಮ ನಾಡಿನ ಸಂಸ್ಕೃತಿಯ ಅಭೂತಪೂರ್ವ ಬೆಳವಣಿಗೆಗೆ ಪೂರಕವಾಗಲಿದೆ
ರಾಜ್ಯದದ್ಯಾoತ ಕಂಬಳ ಪ್ರಸಿದ್ಧ ಪಡೆಯುತ್ತಿದ್ದು ಕೆಲ ವರ್ಷಗಳ ಹಿಂದೆ ಕಂಬಳದ ಕೋಣಗಳ ಸಂಖ್ಯೆ ಬಹಳ ಕಡಿಮೆ ಇದ್ದು ಇತ್ತೀಚಿನ ದಿನಗಳಲ್ಲಿ ಕೋಣಗಳ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚಿದೆ ಕಂಬಳ ಓಟಗಾರರ ಸಂಖ್ಯೆ ಕೂಡಾ ಹೆಚ್ಚಿಸುವ ನಿಟ್ಟಿನಲ್ಲಿ ಆ ನಿಟ್ಟಿನಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಕಂಬಳ ಓಟಗಾರರ ಆಯ್ಕೆ ಮಾಡುವ ಮೂಲಕ ಯುವಜನತೆ ಕಂಬಳದ ಕಡೆ ಆಕರ್ಷಸುವಂತ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಉದ್ಯಮಿ ಕಂಬಳ ಸಮಿತಿ ಮಹಾಪೋಷಕಮಿಯ್ಯಾರು ಮಂಜೆಮನೆ ಆನಂದ ಎಂ ಶೆಟ್ಟಿ ರಾಜ್ಯ ಕಂಬಳ ಸಮಿತಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಂಬಳ ಅಸೋಸಿಯೇಷನ್ (ರಿ )ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್ ವಹಿಸಿದ್ದರು.
ಸುಮಾರು 120 ಮಂದಿ ಕಂಬಳ ಓಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸೆಪ್ಟೆಂಬರ್ 16ರಿಂದ 26ರವರೆಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಂಬಳ ಶಿಬಿರಾರ್ಥಿಗಳಿಗೆ
ನಂದಳಿಕೆ ಶ್ರೀಕಾಂತ್ ಭಟ್ ಸಮವಸ್ತ್ರ ಹಾಗೂ ಕಿಟ್ ವಿತರಿಸಿದರು.
ತರಬೇತಿ ಶಿಬಿರದ ಸಂರಕ್ಷಕರಾದ, ಎ ಪಿ ಎಂ ಸಿ ಹಾಗೂ ಕುಕ್ಕುಂದೂರು ಪಂಚಾಯತ್ ಮಾಜಿ ಅಧ್ಯಕ್ಷ ಅಂಥೋನಿ ಡಿಸೋಜ ನಕ್ರೆ, ರಾಜ್ಯ ಕಂಬಳ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಹೊಸ್ಮಾರು ಸುರೇಶ ಶೆಟ್ಟಿ, ದಿವಾಕರ್ ಜೈನ್, ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ ಸಂದೀಪ್ ಶೆಟ್ಟಿ, ಡಾ ಯೋಗೀಶ್ ಆಚಾರ್ಯ, ಉದಯ ಶೆಟ್ಟಿ ಕಾಂತಾವರ, ಶಾಂತರಾಮ್ ಶೆಟ್ಟಿ, ಪ್ರಕಾಶ್ ಬಲಿಪ ಅಶೋಕ್ ಕುಮಾರ್ ಜೈನ್ ಈದು, ಮಿಯ್ಯಾರು ದೆಂದಬೆಟ್ಟು ಜೀವಂದರ್ ಜೈನ್ ಜನಾರ್ಧನ್ ನಾಯಕ್
ಶೈಲೇಶ್ ಅರಿಗ ಹಿನಪ್ಪಾಡಿ, ದಿವಾಕರ್ ಜೈನ್, ಕಿರಣ್ ಬಲಿಪ, ವಿಶ್ವನಾಥ್ ಶೆಟ್ಟಿ, ತರಬೇತುದಾರರಾದ ಶಾಂತರಾಮ್, ವಸಂತ್ ಜೋಗಿ, ದಿನೇಶ್ ಕಕ್ಕೆಪದವು, ವಿದ್ಯಾದರ್
ಉಪಸ್ಥಿತರಿದ್ದರು.






























































































































