
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ,
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಕಳ, ಅಮೃತ
ಭಾರತಿ ವಿದ್ಯಾಸಂಸ್ಥೆ ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ ನಡೆದ
ಪ್ರೌಢಶಾಲಾ ವಿಭಾಗದ ಕಾರ್ಕಳ ತಾಲೂಕು ಮಟ್ಟದ
ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್
ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ
ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟದ
ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಹತ್ತನೇ ತರಗತಿಯ
ಶಗುನ್ ಎಸ್ ವರ್ಮ ಹೆಗ್ಡೆ, ಶೈನಿ ಡಿಸೋಜ, ಒಂಬತ್ತನೇ
ತರಗತಿಯ ಪಾವನಿ, ಎಂಟನೇ ತರಗತಿಯ ಐಶ್ವರ್ಯ,
ಅನುರಾಧ ಆರ್ ಪೂಜಾರಿ, ಮಾನ್ವಿ, ಸಿದ್ಧಿ ವಸಂತ ಮಡಿವಾಳ
ತಂಡವನ್ನು ಪ್ರತಿನಿಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.






























































































































