31.9 C
Udupi
Sunday, November 22, 2026
spot_img
spot_img
HomeBlogಇನ್ಫ್ಲುಯೆನ್ಸರ್ ಪ್ರಚಾರ ನಂಬಿ ಕ್ರಾಂತಿವರ್ಧಕ ಕ್ರೀಂ ಬಳಕೆ: 17ರ ಬಾಲಕಿಗೆ ಗಂಭೀರ ಮೂತ್ರಪಿಂಡ ಕಾಯಿಲೆ

ಇನ್ಫ್ಲುಯೆನ್ಸರ್ ಪ್ರಚಾರ ನಂಬಿ ಕ್ರಾಂತಿವರ್ಧಕ ಕ್ರೀಂ ಬಳಕೆ: 17ರ ಬಾಲಕಿಗೆ ಗಂಭೀರ ಮೂತ್ರಪಿಂಡ ಕಾಯಿಲೆ

ಮಲಪ್ಪುರಂ: ಇನ್‌ಸ್ಟಾಗ್ರಾಮ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಾಡಿದ ಪ್ರಚಾರವನ್ನು ನಂಬಿ ಕಾಂತಿವರ್ಧಕ ಕ್ರೀಂ ಬಳಸಿದ 17 ವರ್ಷದ ಬಾಲಕಿಯೊಬ್ಬಳು ಗಂಭೀರ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

ಮೊಡವೆ ಹಾಗೂ ಮುಖದ ಕಪ್ಪು ಕಲೆಗಳನ್ನು ನಿವಾರಿಸುವುದಾಗಿ ಪ್ರಚಾರ ಮಾಡಿದ್ದ ಕ್ರೀಂಗೆ ಮರುಳಾದ ಬಾಲಕಿ, ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿದ್ದ ವಾಟ್ಸ್ಆ್ಯಪ್ ಸಂಖ್ಯೆಯ ಮೂಲಕ ಆರ್ಡರ್ ಮಾಡಿದ್ದಳು. ಆರಂಭದಲ್ಲಿ ಉತ್ತಮ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ ವರ್ಷವೂ ಹಲವು ಬಾಟಲಿ ಕ್ರೀಂ ಖರೀದಿಸಿ ಬಳಸಿದ್ದಳು ಎನ್ನಲಾಗಿದೆ.

ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಮೂತ್ರಪಿಂಡ ತಜ್ಞೆ ಗೌರಿ ಎಸ್. ಅವರ ಪ್ರಕಾರ, ಪರೀಕ್ಷೆ ವೇಳೆ ಬಾಲಕಿಯ ದೇಹ ಮತ್ತು ರಕ್ತದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದೆ. ಇದರಿಂದ ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ಹಾನಿಯಾಗಿದ್ದು, ಆಕೆಗೆ ‘ಮೆಂಬ್ರೇನಸ್ ನೆಫ್ರೊಪತಿ’ ಎಂಬ ಗಂಭೀರ ಕಾಯಿಲೆ ಕಾಣಿಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿತ್ತು ಎಂದು ತಿಳಿಸಿದ್ದಾರೆ.

ಕ್ರೀಂನಲ್ಲಿ ಪಾದರಸದ ಅನುಮತಿತ ಪ್ರಮಾಣ ಪ್ರತಿ ದಶಲಕ್ಷಕ್ಕೆ ಒಂದು ಭಾಗಕ್ಕಿಂತ ಕಡಿಮೆ ಇರಬೇಕಾದರೆ, ಪರೀಕ್ಷೆಯಲ್ಲಿ 12,500 ಭಾಗದಷ್ಟು ಪಾದರಸ ಪತ್ತೆಯಾಗಿದೆ. ಈ ವಿಷಕಾರಿ ಅಂಶವೇ ಬಾಲಕಿಯ ಮೂತ್ರಪಿಂಡ ಸಮಸ್ಯೆಗೆ ಕಾರಣವಾಗಿರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತ್ವಚೆಯ ಬಣ್ಣ ಬದಲಾಯಿಸುವ ಹಾಗೂ ತ್ವರಿತ ಫಲಿತಾಂಶ ನೀಡುವ ಭರವಸೆ ನೀಡುವ ಕಾಂತಿವರ್ಧಕ ಉತ್ಪನ್ನಗಳ ಜಾಹೀರಾತುಗಳನ್ನು ನಂಬುವಾಗ ಎಚ್ಚರಿಕೆ ವಹಿಸುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಈ ನಡುವೆ ಬಾಲಕಿಯ ಪೋಷಕರು ಕ್ರೀಂ ತಯಾರಿಕಾ ಕಂಪೆನಿ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಕ್ರೀಂನ ಹೆಸರನ್ನು ಬಹಿರಂಗಪಡಿಸಿಲ್ಲ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page