
ಆರೋಗ್ಯ ಭಾರತಿ ಕಾರ್ಕಳ ಇವರ ವತಿಯಿಂದ ಮಾಳ ಗ್ರಾಮದ ಎಡಪಾಡಿ ತ್ರಿಭುವನ ತೋಟದ ಮನೆಯಲ್ಲಿ ನ. 7 ಶನಿವಾರ ಬೆಳಿಗ್ಗೆ ಎಂಟರಿಂದ ಹನ್ನೆರಡು ಗಂಟೆಯವರೆಗೆ ಧನ್ವಂತರಿ ಯಾಗವು ಸಾಂಗವಾಗಿ ನೆರವೇರಿತು.
ಉತ್ತರ ಭಾರತದಲ್ಲಿ ದಂತ್ಯರಾಸ್ ಎಂಬ ಹಬ್ಬವನ್ನು ದಕ್ಷಿಣ ಭಾರತದ ಜನರು ಧನಾತ್ರಿಯೋಧಶಿ ಧನ್ವಂತರಿ ಜಯಂತಿ ಎಂದು ಆಚರಿಸುತ್ತಾರೆ. ಇದೇ ಪ್ರಯುಕ್ತ ಮಧ್ಯಾಹ್ನ ಮಾಳ ಗ್ರಾಮದ ಗುರುಕುಲ ಶಾಲೆಯ..ಮತ್ತು ಸಾರ್ವಜನಿಕರಿಗೆ.. ಪ್ರಸಾದ ಭೋಜನ ಏರ್ಪಡಾಗಿತ್ತು. ಅನಂತರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸನ್ಮಾನ್ಯ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ತೋಟದ ಮನೆಯ ಔಷಧಿ ಸಸ್ಯ ನರ್ಸರಿ ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಉಚಿತ ಔಷಧಿ ಸಸ್ಯ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಆಗಮಿಸಿದ ಕರ್ನಾಟಕ ಔಷಧಿ ಗಿಡಮೂಲಿಕೆ ಪ್ರಾಧಿಕಾರದ ಡಾಕ್ಟರ್ ಪ್ರಭು ಹಾಗೂ ನಿಟ್ಟೆಯ ವ್ಯವಸಾಯ ಸಂಘದ ನಿರ್ದೇಶಕ ಅಶೋಕ ಅಡ್ಯಂತಾಯ. ಮೂಲಿಕೆಯ ಆಸಕ್ತಿಯ ರಾಜೇಶ್ ಭಟ್ ಪಾಂಡುರಂಗ ಜೋಶಿ. ಗುರುಕುಲ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ.ಖ್ಯಾತ ಲೇಖಕ.. ಅಮೆರಿಕದ ಅಂಕಣಕಾರ ಶ್ರೀವತ್ಸ ಜೋಶಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶೋಕ್ ಬರ್ವೆ.ಉಡುಪಿಯ ಸಂಗೀತ ವಿದ್ವಾಂಸ ಅರವಿಂದ ಹೆಬ್ಬಾರ್ ಪಾಲ್ಗೊಂಡಿದ್ದರು. ಸನ್ಮಾನ್ಯ ಸಂಸತ್ ಸದಸ್ಯರು ಮುಕ್ಕಾಲು ತಾಸು ಗಿಡಮೂಲಿಕೆ ವೈದ್ಯದ ಬಗ್ಗೆ ಹಾಗೂ ಅವುಗಳ ಮಾರುಕಟ್ಟೆ ಸಂಗತಿಗಳ ಕುರಿತಾಗಿ ಸುಧೀರ್ಘ ಚರ್ಚೆ ನಡೆಸಿದರು. ಕಾರ್ಕಳದ ಖ್ಯಾತ ವೈದ್ಯ ಭರತೇಶ್ ಹಾಗೂ ಅವರ ಜೊತೆಗೆ ಕಲಿಕೆ ವೈದ್ಯರು ಗಿಡಮೂಲಿಕೆಯ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಲು ನರ್ಸರಿ ಕ್ಷೇತ್ರದಲ್ಲಿ ತಾವು ತೊಡಗಿಸಿಕೊಳ್ಳುವ ಸಂಗತಿಗಳ ಬಗ್ಗೆ ಚರ್ಚಿಸಿದರು. ಮಾಳದ ಗುರುಕುಲ ಶಾಲೆಯ ಮಕ್ಕಳಿಗೆ ಗಿಡಮೂಲಿಕೆ ಪರಿಚಯದ ಬಗ್ಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆದ್ದ 5 ಅಭ್ಯರ್ಥಿಗಳಿಗೆ ಪುಸ್ತಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೆ ಆರೋಗ್ಯ ಭಾರತಿ ಪ್ರಕಟಣೆ ಬಾಲೌಪಚಾರ ಎಂಬ ಕೈಪಿಡಿಯನ್ನು ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮ ಡಾ. ಸತ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಯಶಸ್ವೀಯಾಗಿ ನೆರವೇರಿತು.





















































































