ವಿಶೇಷ ಶಾಲಾ ಶಿಕ್ಷಕ ಶಿಕ್ಷಕೇತರರಿಗೆ,ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ

ವಿಜೇತ ವಿಶೇಷ ಶಾಲೆ, ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ (ರಿ.) ಇದರ ದಶಕ ವಿಜೇತೋತ್ಸವ ದ ಪ್ರಯುಕ್ತ ಕ. ರಾಜ್ಯ ವಿಶೇಷ ಶಿಕ್ಷಕ–ಶಿಕ್ಷಕೇತರ ಸಂಘ (ನೋಂ.), ಬೆಂಗಳೂರು, ಕ್ರಿಯೇಟಿವ್ ಪಿ.ಯು. ಕಾಲೇಜು, ಕಾರ್ಕಳ, ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಕಾಡೆಮಿ ಹಾಗೂ ವಿಶೇಷ ಶಿಕ್ಷಕ–ಶಿಕ್ಷಕೇತರರ ಸಂಘ ಉಡುಪಿ ಮತ್ತು ವಿಶೇಷ ಮಕ್ಕಳ ಪಾಲಕರ ಸಂಘದ ಸಹಯೋಗದಲ್ಲಿ ವಿಶೇಷ ಶಿಕ್ಷಕ -ಶಿಕ್ಷಕೇತರರಿಗೆ ರಾಜ್ಯಮಟ್ಟದ ‘ಜಾನಪದ ನೃತ್ಯ’ ವಿಜೇತೋತ್ಸವ–2026 ಕಾರ್ಯಕ್ರಮವನ್ನು ಅಕ್ಟೋಬರ್ 24ರಂದು ಶನಿವಾರ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸಿ. ಎ ಕಮಲಾಕ್ಷ ಕಾಮತ್ ಹಾಗೂ ಕ್ರಿಯೇಟಿವ್ ಪಿ.ಯು. ಕಾಲೇಜಿನ ಸ್ಥಾಪಕರು ಹಾಗೂ ಪ್ರಾಂಶುಪಾಲರರಾದ ಗಣಪತಿ, ಇವರು ನೆರವೇರಿಸಿದರು. ವಿವಿಧ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ವಿಜೇತ ವಿಶೇಷ ಶಾಲಾ CSR ಹೆಡ್ ಜಯಾನಂದ್ ಪೀಟರ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಕಾರ್ಕಳ ವಿಧಾನ ಸಭಾಕ್ಷೇತ್ರದ ಶಾಸಕರಾದ ಮಾನ್ಯ ವಿ ಸುನಿಲ್ ಕುಮಾರ್ ಭಾಗವಹಿಸಿ ಶುಭ ಹಾರೈಸಿದರು.

ಉದಯಕುಮಾರ್ ಶೆಟ್ಟಿ ಮುನಿಯಾಲು, ಗೌರವಾಧ್ಯಕ್ಷರು ವಿಜೇತ ವಿಶೇಷ ಶಾಲೆ ಅಧ್ಯಕ್ಷತೆಯನ್ನು ವಹಿಸಿದ್ದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಟಾನ, ವಿಜೇತ ಶಾಲೆ ಹಾಗೂ ವಿವಿಧ ಸಂಘಟನೆಗಳಿಗೆ, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅಥಿತಿಗಳಾಗಿ ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ರತ್ನಾ, ಕ್ರಿಯೇಟಿವ್ ಪಿ.ಯು. ಕಾಲೇಜಿನ ಸಹ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿ ಹಾಗೂ ಅಶ್ವಥ್ ಎಸ್.ಎಲ್, ತುಳುನಾಡ ತುಳುವೆರ್ ಕೂಟದ ಶ್ರೀಮತಿ ಆಶಾ ಹರೀಶ್ ಸುರತ್ಕಲ್, ವಿಶೇಷ ಮಕ್ಕಳ ಪಾಲಕರ ಸಂಘದ ಅಧ್ಯಕ್ಷರಾದ ಜಯವಿಠಲ್,ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ–ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಆಗ್ನೆಸ್ ಕುಂದರ್, ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಡಾ. ಕಾಂತಿಹರೀಶ್, ರೇಣುಕಾ ಎಲ್ಲಮ್ಮ ವಿಶೇಷ ಶಾಲೆಯ ಅಧ್ಯಕ್ಷರಾದ ಶಿವಕುಮಾರ್ ರಾಣೇಬೆನ್ನೂರ್, ಉಪಾಧ್ಯಕ್ಷರಾದ ರವೀಂದ್ರ ಹೆಚ್. ಕೋಶಾಧಿಕಾರಿಯಾದ ಕರೆಪ್ಪ ಬಿ.ಹೆಚ್., ಸಾಧ್ಯ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ರೀಮತಿ ಆರತಿ ಅಚ್ಚುಡ, ಉಡುಪಿ ವಿಶೇಷ ಶಿಕ್ಷಕರ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಶಶಿಕಲಾ ಕೋಟ್ಯಾನ್, ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಸೌಮ್ಯ ದೇವಾಡಿಗ ಹಿರ್ಗಾನ ಪಂಚಾಯತ್ ಮಾಜಿ ಅಧ್ಯಕ್ಷರು ಸಂತೋಷ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅನುಗ್ರಹ ಸ್ಪೆಷಲ್ ಸ್ಕೂಲ್, ಬಳ್ಳಾರಿಯ ಪ್ರತಿಭಾನ್ವಿತ ವಿಶೇಷ ಶಿಕ್ಷಕರಾದ ಶ್ರೀ ವಸಂತ ಕುಮಾರ್ ಇವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯ ನೃತ್ಯ ತಂಡಗಳಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.
ವಿಜೇತೋತ್ಸವ 2026 ರಾಜ್ಯ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಲಯನ್ಸ್ ವಿಶೇಷ ಶಾಲೆ, ಸುರತ್ಕಲ್ ಪ್ರಥಮ ಸ್ಥಾನ ಪಡೆದು ₹25,000 ನಗದು ಹಾಗೂ ಫಲಕ, ಸಾನಿಧ್ಯ ವಿಶೇಷ ಶಾಲೆ, ಶಕ್ತಿನಗರ, ಮಂಗಳೂರು ದ್ವಿತೀಯ ಸ್ಥಾನ ₹20,000 ನಗದು ಹಾಗೂ ಫಲಕ, ಸೈಂಟ್ ಮೇರಿಸ್ ವಿಶೇಷ ಶಾಲೆ, ಕಿನ್ನಿಗೋಳಿ ತೃತೀತ ಸ್ಥಾನ ₹15,000 ನಗದು ಹಾಗೂ ಫಲಕ ಪಡೆದುಕೊಂಡರು.
ಸಮಾಧಾನಕರ ಬಹುಮಾನವಾಗಿ 4 ನೇ ಸ್ಥಾನವನ್ನು ಪ್ರೀತಿ ವಿಶೇಷ ಶಾಲೆ, ಮಂಡ್ಯ 5ನೇ ಸ್ಥಾನ ಮಾನಸ ವಿಶೇಷ ಶಾಲೆ, ಪಾoಬೂರು , ಉಡುಪಿ 6 ನೇ ಸ್ಥಾನ
ಆಪರ್ಚುನಿಟಿ ವಿಶೇಷ ಶಾಲೆ, ಕೊಡಗು, ಈ 3 ಶಾಲೆಗಳು ಪಡೆದುಕೊಂಡಿದ್ದು, ತಲಾ ₹5,000 ನಗದು ಬಹುಮಾನ ಹಾಗೂ ಫಲಕ ನೀಡಲಾಯಿತು.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಎಲ್ಲಾ 18 ಶಾಲೆಗಳ ಶಿಕ್ಷಕ ಶಿಕ್ಷಕೇತರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಲಾ ₹3,000 ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ವಿಜೇತೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ರವೀಂದ್ರ ಎಚ್ ಕೃತಜ್ಞತೆಗಳನ್ನು ಸಲ್ಲಿಸಿ, ಲೋಹಿತ್ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿ, ಡಾ ಕಾಂತಿ ಹರೀಶ್ ಸ್ವಾಗತಿಸಿ, ಡಾ ವಸಂತ್ ಕುಮಾರ್ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು.
ಸನ್ಮಾನಿತರ ವಿವರ ವಾಚನವನ್ನು ಶ್ರೀಮತಿ ಶಶಿಕಲಾ ಕೋಟ್ಯಾನ್ ಹಾಗೂ ಹರ್ಷಿತಾ ಕಿರಣ್ ಸಹಾಯಕ ಮುಖ್ಯೋಪಾಧ್ಯಾಯಿನಿ ವಾಚಿಸಿದರು. ವಿಜೇತ ವಿಶೇಷ ಶಾಲಾ ಸಿಬ್ಬಂದಿಗಳು ಪ್ರಾರ್ಥನೆಯನ್ನು ನೆರವೇರಿಸಿ, ಸ್ವಾಗತ ನೃತ್ಯದೊಂದಿಗೆ ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ಪರ್ಕಳ ನೃತ್ಯ ಸ್ಪರ್ಧೆಯ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ರಮೇಶ್ ಕಲ್ಮಾಡಿ, ನಿವೃತ್ತ ಶಿಕ್ಷಕರು, ಶ್ರೀ ವಿಜಯ್ ಎಂ, ನಿವೃತ್ತ ಶಿಕ್ಷಕರು, ಕು ಅಕ್ಷತಾ ರಾವ್ ನೃತ್ಯ ಸಂಯೋಜಕರು, ಭಾಗವಹಿಸಿದ್ದು ಅವರನ್ನು ಗೌರವಿಸಲಾಯಿತು.























