28.8 C
Udupi
Thursday, October 22, 2026
spot_img
spot_img
HomeBlogಕಾರ್ಕಳ : ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 2123 ನೇ ಮದ್ಯವರ್ಜನ ಶಿಬಿರದ ಪ್ರಥಮ...

ಕಾರ್ಕಳ : ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 2123 ನೇ ಮದ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆ

ಕಾರ್ಕಳ : ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 2123ನೇ ಮದ್ಯವರ್ಜನ ಶಿಬಿರದ ಪ್ರಥಮ ಮಾಸಿಕ ಸಭೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಕಾರ್ಕಳದಲ್ಲಿ ನಡೆಯಿತು.

ಮಾಸಿಕ ಸಭೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ವೃಷಭ ರಾಜ್ ಕಡoಬ ರವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಹೊಸ ಜೀವನ ನಡೆಸುತ್ತಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಇವತ್ತಿನ ಸಭೆಯ ಅಧ್ಯಕ್ಷತೆಯನ್ನು 2123ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಿಜಯ ಶೆಟ್ಟಿ ರವರು ವಹಿಸಿ ಶುಭ ಹಾರೈಸಿದರು.

ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯರವರು ಸಭೆಯಲ್ಲಿ ನವಜೀವನ ಸಮಿತಿ ಬಲವರ್ಧನೆ ಮತ್ತು ಅನು ಪಾಲನೆ, ನವಜೀವನ ಸಮಿತಿ ಸದಸ್ಯರ ವಾರದ ಸಭೆಯ ವರದಿ, ಹಾಜರಾತಿ ಕುರಿತು ,ಫ್ರೀ ಕಾನ್ಫರೆನ್ಸ್ ಸಭೆ, ಶತದಿನೋತ್ಸವ ಕುರಿತು ಮಾಹಿತಿ ನೀಡಿದರು .

ಸಭಾ ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ಉದಯ್ ಹೆಗ್ಡೆ, ಜನಜಾಗೃತಿ ವೇದಿಕೆ ಸದಸ್ಯರಾದ ಕಮಲಾಕ್ಷ ನಾಯಕ್ , ಉದಯ್ ಶೆಟ್ಟಿ, ಅಶೋಕ್ ಶೆಟ್ಟಿ
ತಾರಾನಾಥ್ ಶೆಟ್ಟಿ ಹಾಗೂ ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಶಿಬಿರಕ್ಕೆ ಸೇರಿ ಪಾನಮುಕ್ತರಾದ ನವ ಜೀವನ ಸಮಿತಿ ಸದಸ್ಯರು ತಮ್ಮ ಒಂದು ತಿಂಗಳ ಪಾನಮುಕ್ತ ಜೀವನದ ಅನುಭವಗಳನ್ನು ಹಂಚಿಕೊಂಡರು.

ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಲಯ ಮೇಲ್ವಿಚಾರಕಿ ಶ್ರೀಮತಿ ಗೀತಾ ರವರು ಸ್ವಾಗತಿಸಿ , ಜನಜಾಗ್ರತಿ ಮೇಲ್ವಿಚಾರಕರ ಶ್ರೀ ನಿತೇಶ್ ಕೆ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page