31.4 C
Udupi
Tuesday, October 20, 2026
spot_img
spot_img
HomeBlog"ಮೋಟಾರು ವಾಹನದ ಸ್ಟೀರಿಂಗ್ ಚಕ್ರವು ಮಗುವಿನ ಕೈಯಲ್ಲಿ ಆಟಿಕೆ ಆಗಲು ಸಾಧ್ಯವಿಲ್ಲ, ಹಾಗೆಯೇ ಸಾರ್ವಜನಿಕ ರಸ್ತೆಯು...

“ಮೋಟಾರು ವಾಹನದ ಸ್ಟೀರಿಂಗ್ ಚಕ್ರವು ಮಗುವಿನ ಕೈಯಲ್ಲಿ ಆಟಿಕೆ ಆಗಲು ಸಾಧ್ಯವಿಲ್ಲ, ಹಾಗೆಯೇ ಸಾರ್ವಜನಿಕ ರಸ್ತೆಯು ಇಂತಹ ಬೇಜವಾಬ್ದಾರಿ ವರ್ತನೆಗೆ ಆಟದ ಮೈದಾನವಾಗಲು ಸಾಧ್ಯವಿಲ್ಲ” : ಹೈಕೋರ್ಟ್

ಬೆಂಗಳೂರು: 14 ವರ್ಷದ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ್ದ ತಂದೆಯ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಮೈಸೂರಿನ 51 ವರ್ಷದ ನದೀಮ್ ಉರ್ ರೆಹಮಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ವಜಾಗೊಳಿಸಿದೆ.

2020ರ ಡಿಸೆಂಬರ್ 10ರಂದು ರಾತ್ರಿ ಬೆಂಗಳೂರು-ಮೈಸೂರು ರಸ್ತೆಯ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಉಷಾ (30), ರಮೇಶ್ (40) ಮತ್ತು ಅವರ ಐದು ವರ್ಷದ ಮಗ ಮೋನಿಷ್ ಮೃತಪಟ್ಟಿದ್ದರು. ಮತ್ತೊಬ್ಬ ಮಗ ಗಾಯಗೊಂಡಿದ್ದ.

ಈ ಪ್ರಕರಣದಲ್ಲಿ ತಂದೆ ನದೀಮ್ ಉರ್ ರೆಹಮಾನ್ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಿ ಮೈಸೂರಿನ ಎನ್.ಆರ್. ಸಂಚಾರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಸೆಷನ್ಸ್ ನ್ಯಾಯಾಲಯವೂ ಅವರನ್ನು ಆರೋಪದಿಂದ ಮುಕ್ತಗೊಳಿಸಲು ನಿರಾಕರಿಸಿತ್ತು.

ತಮ್ಮ ಅರಿವಿಗೆ ಬಾರದೆ ಮಗ ಕಾರನ್ನು ತೆಗೆದುಕೊಂಡು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಂದೆ ವಾದಿಸಿದ್ದರು. ಅಪಘಾತದ ಪರಿಣಾಮ ಗಂಭೀರವಾಗಿದ್ದ ಮಾತ್ರಕ್ಕೆ ಅದನ್ನು ಕೊಲೆಗೆ ಸಮನಲ್ಲದ ನರಹತ್ಯೆ ಎಂದು ಪರಿಗಣಿಸಲಾಗದು ಎಂದೂ ಅವರು ತಿಳಿಸಿದ್ದರು.

ಆದರೆ, ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ತಂದೆಯೇ ಮಗನಿಗೆ ಕಾರಿನ ಕೀಲಿ ನೀಡಿ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿಂದೆಯೂ ಬಾಲಕನಿಗೆ ಕಾರು ಚಲಾಯಿಸಲು ಅನುಮತಿ ನೀಡಲಾಗಿತ್ತು ಎಂಬ ಆರೋಪವಿದೆ ಎಂದು ಹೇಳಿದರು.

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಕಾನೂನುಬಾಹಿರ ಎಂಬ ಅರಿವು ಪೋಷಕರಿಗೆ ಇರಬೇಕು. ಇಂತಹ ನಿರ್ಲಕ್ಷ್ಯದಿಂದ ಮಾರಣಾಂತಿಕ ಅಪಘಾತ ಸಂಭವಿಸಿದಾಗ, ಅದರ ಕ್ರಿಮಿನಲ್ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

“ಮೋಟಾರು ವಾಹನದ ಸ್ಟೀರಿಂಗ್ ಚಕ್ರವು ಮಗುವಿನ ಕೈಯಲ್ಲಿ ಆಟಿಕೆ ಆಗಲು ಸಾಧ್ಯವಿಲ್ಲ,; ಸಾರ್ವಜನಿಕ ರಸ್ತೆಯೂ ಬೇಜವಾಬ್ದಾರಿ ವರ್ತನೆಗೆ ಆಟದ ಮೈದಾನವಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದರು. 14 ವರ್ಷದ ಮಗುವಿಗೆ ವಾಹನ ಚಲಾಯಿಸಲು ಕಾನೂನುಬದ್ಧ ಅರ್ಹತೆ ಇಲ್ಲ ಎಂಬುದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಕಾರು ನೀಡಿದ್ದರೆ ಅದರ ಪರಿಣಾಮಗಳ ಬಗ್ಗೆ ತಂದೆಗೆ ಅರಿವಿತ್ತೇ ಎಂಬುದನ್ನು ವಿಚಾರಣೆಯಲ್ಲಿ ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ತಿಳಿಸಿತು.

ಇದೇ ವೇಳೆ, 2025-26ನೇ ಸಾಲಿನಲ್ಲಿ ದೇಶಾದ್ಯಂತ ಅಪ್ರಾಪ್ತರು ಭಾಗಿಯಾದ 11,890 ರಸ್ತೆ ಅಪಘಾತಗಳು ವರದಿಯಾಗಿದ್ದು, ಕರ್ನಾಟಕದಲ್ಲಿ 751 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಕರ್ನಾಟಕ ದೇಶದಲ್ಲಿ ಆರನೇ ಸ್ಥಾನದಲ್ಲಿದೆ ಎಂದು ನ್ಯಾಯಾಲಯ ಉಲ್ಲೇಖಿಸಿತು.

ಗಂಭೀರ ಹಾಗೂ ಮಾರಣಾಂತಿಕ ಅಪಘಾತಗಳಲ್ಲಿ 17ರಿಂದ 23 ವರ್ಷದ ಯುವ ಚಾಲಕರ ಪಾಲು ಹೆಚ್ಚಿರುವುದನ್ನು ಅಂಕಿಅಂಶಗಳು ಸೂಚಿಸುತ್ತವೆ. ಇಂತಹ ಪ್ರಕರಣಗಳಲ್ಲಿ ಆರೋಪಪಟ್ಟಿಯಲ್ಲಿ ಪ್ರಾಥಮಿಕ ಸಾಕ್ಷ್ಯಗಳಿದ್ದಾಗ, ವಿಚಾರಣೆಯನ್ನು ಆರಂಭದಲ್ಲೇ ರದ್ದುಗೊಳಿಸುವ ಮೊದಲು ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ಹೇಳಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page