
ಬೆಳ್ಮಣ್ಣು: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 18ರಂದು ಭಾನುವಾರ ಸಂಜೆ 6.30ಕ್ಕೆ ‘ಚೂಡಾಮಣಿ’ (ಲಂಕಾ ದಹನ) ಎಂಬ ಪೌರಾಣಿಕ ಕಥಾ ನಾಟಕ ಆಯೋಜಿಸಲಾಗಿದೆ.
ಶೋಭಾನೆ ಬಳಗ ಬೆಳ್ಮಣ್ಣು ಇದರ 11ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ನವರಾತ್ರಿಯ ಪ್ರಯುಕ್ತ ಮನೋಜ್ ಗಣೇಶಪುರ ಅವರ ನಿರ್ದೇಶನದಲ್ಲಿ ಈ ಪೌರಾಣಿಕ ನಾಟಕ ಆಯೋಜಿಸಲಾಗಿದ್ದು ಸರ್ವರಿಗೂ ಸ್ವಾಗತ ಕೋರಲಾಗಿದೆ.






















