31.4 C
Udupi
Tuesday, September 29, 2026
spot_img
spot_img
HomeBlog‘ನನ್ನ ವಿರುದ್ಧ 110ಕ್ಕೂ ಹೆಚ್ಚು ಕೇಸ್‌ಗಳಿವೆ, ಇದೊಂದು ದೊಡ್ಡ ವಿಷಯವಲ್ಲ’: ಪ್ರಭಾಕರ ಭಟ್

‘ನನ್ನ ವಿರುದ್ಧ 110ಕ್ಕೂ ಹೆಚ್ಚು ಕೇಸ್‌ಗಳಿವೆ, ಇದೊಂದು ದೊಡ್ಡ ವಿಷಯವಲ್ಲ’: ಪ್ರಭಾಕರ ಭಟ್

ಬಂಟ್ವಾಳ: ‘ನಾನು ಕಾನೂನು ಉಲ್ಲಂಘಿಸಿ ಏನಾದರೂ ಮಾಡಿದ್ದರೆ ನನ್ನ ವಿರುದ್ಧ ಕೇಸ್ ದಾಖಲಿಸಲಿ. ಅದಕ್ಕೆ ನನಗೆ ಯಾವುದೇ ತಕರಾರಿಲ್ಲ. ಈಗ ನನ್ನ ಮೇಲೆ ಮತ್ತೊಂದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ನನ್ನ ವಿರುದ್ಧ ಈಗಾಗಲೇ 110ಕ್ಕೂ ಹೆಚ್ಚು ಕೇಸ್‌ಗಳಿದ್ದು, ಇದೊಂದು ದೊಡ್ಡ ವಿಷಯವಲ್ಲ’ ಎಂದು ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.

ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಮುಂದುವರಿಸಿರುವುದನ್ನು ವಿರೋಧಿಸಿ ವಿಹಿಂಪ ಹಾಗೂ ಬಜರಂಗದಳದ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ತಮ್ಮ ವಿರುದ್ಧದ ಪೊಲೀಸ್ ನೋಟೀಸ್ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಂವಿಧಾನ ನಮಗೆ ವಾಕ್‌ ಸ್ವಾತಂತ್ರ್ಯ ನೀಡಿದೆ. ನಾನು ಯಾರೊಂದಿಗಾದರೂ ಮಾತನಾಡುವುದು ತಪ್ಪೇ? ನಾನು ಯಾರಿಗಾದರೂ ಹೊಡಿ ಅಥವಾ ಕೊಲ್ಲಿ ಎಂದು ಹೇಳಿದ್ದೇನೆಯೇ? ನಾನು ಮಾತನಾಡಿದ ಸಂಭಾಷಣೆ ಅವರ ಬಳಿ ಇದ್ದರೆ ಅದರಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಲಿ’ ಎಂದರು.

‘ಕೇವಲ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡಿದ ಕಾರಣಕ್ಕೆ ಕೇಸ್ ಹಾಕುವುದಾದರೆ, ಎಲ್ಲರಿಗೂ ಇದೇ ನಿಯಮ ಅನ್ವಯಿಸಬೇಕಲ್ಲವೇ? ಪ್ರಭಾಕರ ಭಟ್‌ಗೆ ಮೈಕ್ ಹಿಡಿದಿದ್ದೀರಿ ಎಂಬ ಕಾರಣಕ್ಕೆ ಮಾಧ್ಯಮದವರ ಮೇಲೂ ಪ್ರಕರಣ ದಾಖಲಿಸುತ್ತೀರಾ?’ ಎಂದು ಅವರು ಪ್ರಶ್ನಿಸಿದರು.

ಹಿಂದೂ ಸಮಾಜದ ಮೇಲೆ ನಿರಂತರವಾಗಿ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳಿದ ಅವರು, ‘ನಮಗೆ ಇರುವುದೊಂದೇ ದೇಶ. ಭಾರತದಲ್ಲೇ ನಾವು ಬದುಕಬೇಕು. ಕಾನೂನು ಉಲ್ಲಂಘನೆ ಮಾಡಿದ್ದರೆ ಪ್ರಕರಣ ದಾಖಲಿಸಿ, ಆದರೆ ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು’ ಎಂದು ಹೇಳಿದರು.

ಫೋನ್‌ನಲ್ಲಿ ಮಾತನಾಡಿದ ಕಾರಣಕ್ಕೆ ನೋಟೀಸ್ ನೀಡಿರುವುದನ್ನೂ ಅವರು ಪ್ರಶ್ನಿಸಿದರು. ‘ಫೋನ್ ಮಾಡಿದ ತಕ್ಷಣ ಎಲ್ಲರನ್ನೂ ವಿಚಾರಣೆಗೆ ಕರೆಯುತ್ತಾರೆಯೇ? ಕಾನೂನನ್ನು ಉಲ್ಲಂಘನೆ ಮಾಡುವುದು ಅವರೇ. ಅದಕ್ಕೋಸ್ಕರ ಜನ ಅಸಂತುಷ್ಟರಾಗಿದ್ದಾರೆ’ ಎಂದು ಆರೋಪಿಸಿದರು.

‘ಯಾರನ್ನೂ ಹೊಡೆಯಿರಿ, ಯಾರನ್ನಾದರೂ ಬಡಿಯಿರಿ ಎಂದು ನಾವು ಹೇಳುವುದಿಲ್ಲ. ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ನಮಗೆ ರಕ್ಷಣೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ನೋಟೀಸ್‌ಗೆ ಮುಂದಿನ ಕ್ರಮದ ಕುರಿತು ಕೇಳಿದಾಗ, ‘ನೋಡೋಣ, ಏನಾಗುತ್ತದೆಯೋ ನೋಡೋಣ. ನನ್ನ ವಿರುದ್ಧ 110ಕ್ಕೂ ಹೆಚ್ಚು ಪ್ರಕರಣಗಳಿವೆ. ಜೈಲಿಗೂ ಹೋಗಿ ಬಂದಿದ್ದೇನೆ. ಇಂದಿರಾ ಗಾಂಧಿ ಕಾಲದಲ್ಲಿ ನನ್ನನ್ನಷ್ಟೇ ಅಲ್ಲ, ನನ್ನ ಪತ್ನಿಯನ್ನೂ ಜೈಲಿಗೆ ಕರೆದೊಯ್ದಿದ್ದರು. ಇನ್ನೇನು ಗಲ್ಲಿಗೇರಿಸುವುದು ಮಾತ್ರ ಬಾಕಿ. ತಾಕತ್ತಿದ್ದರೆ ಮಾಡಲಿ’ ಎಂದು ಪ್ರಭಾಕರ ಭಟ್ ಕಲ್ಲಡ್ಕ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page