30.7 C
Udupi
Tuesday, September 29, 2026
spot_img
spot_img
HomeBlogರೇಣುಕಸ್ವಾಮಿ ಹತ್ಯೆ ಪ್ರಕರಣ: ‘ಡಿ’ ಗ್ಯಾಂಗ್‌ ಭೀಕರತೆ ಬಿಚ್ಚಿಟ್ಟ ಮಾಫಿ ಸಾಕ್ಷಿ ಪ್ರದೋಷ್

ರೇಣುಕಸ್ವಾಮಿ ಹತ್ಯೆ ಪ್ರಕರಣ: ‘ಡಿ’ ಗ್ಯಾಂಗ್‌ ಭೀಕರತೆ ಬಿಚ್ಚಿಟ್ಟ ಮಾಫಿ ಸಾಕ್ಷಿ ಪ್ರದೋಷ್

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್‌ ರಾವ್‌ ಅವರ ಹೇಳಿಕೆಯನ್ನು ಸೋಮವಾರ (ಸೆ.28) ಬೆಂಗಳೂರಿನ 59ನೇ ಸೆಷನ್ಸ್‌ ಕೋರ್ಟ್‌ನಲ್ಲಿ ಇನ್‌ ಕ್ಯಾಮೆರಾ ಪ್ರಕ್ರಿಯೆ ಮೂಲಕ ದಾಖಲಿಸಿಕೊಳ್ಳಲಾಗಿದೆ.

ಸುಮಾರು ನಾಲ್ಕು ಗಂಟೆಗಳ ಕಾಲ ಪ್ರದೋಷ್‌ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ದರ್ಶನ್‌ ಸೇರಿದಂತೆ ಇತರ ಆರೋಪಿಗಳು ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ರೇಣುಕಸ್ವಾಮಿ ಹತ್ಯೆಗೂ ಮುನ್ನ ನಡೆದ ಘಟನೆಗಳು, ಆತನನ್ನು ಪಟ್ಟಣಗೆರೆ ಶೆಡ್‌ಗೆ ಕರೆತಂದ ರೀತಿ ಹಾಗೂ ಹತ್ಯೆಯ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಚರಂಡಿ ಬಳಿ ಬಿಸಾಡಿದ ಬಗ್ಗೆ ಪ್ರದೋಷ್‌ ವಿವರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪವಿತ್ರಾಗೌಡ, ದರ್ಶನ್‌, ಪವನ್‌ ಸೇರಿದಂತೆ ಇತರರ ಪಾತ್ರದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

ಪವಿತ್ರಾಗೌಡಗೆ ರೇಣುಕಸ್ವಾಮಿ ಮೆಸೇಜ್‌ ಮಾಡಿದ್ದರಿಂದ ಆತನನ್ನು ಸುಳ್ಳು ಹೇಳಿ ಪಟ್ಟಣಗೆರೆ ಶೆಡ್‌ಗೆ ಕರೆಸಲಾಗಿತ್ತು. ಆರಂಭದಲ್ಲಿ ಆತನಿಗೆ ಎಚ್ಚರಿಕೆ ನೀಡಿ ನಾಲ್ಕು ಬಾರಿಸಿ ಕಳುಹಿಸುವ ಉದ್ದೇಶವಿತ್ತು ಎಂದು ಪ್ರದೋಷ್‌ ತಿಳಿಸಿದ್ದಾರೆ.

ಆದರೆ ದರ್ಶನ್‌ ಶೆಡ್‌ಗೆ ಬಂದ ಬಳಿಕ ಪರಿಸ್ಥಿತಿ ಬದಲಾಗಿದ್ದು, ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿದರು ಎಂದು ಅವರು ಹೇಳಿದ್ದಾರೆ. ಪವಿತ್ರಾಗೌಡರನ್ನು ತೋರಿಸಿ, ‘ಇವಳು ಯಾರು ಗೊತ್ತಾ?’ ಎಂದು ಪ್ರಶ್ನಿಸಿದ ದರ್ಶನ್‌, ಆಕೆ ತನ್ನ ಪತ್ನಿ ಎಂದು ಹೇಳಿ ರೇಣುಕಸ್ವಾಮಿಯನ್ನು ಗದರಿಸಿದ್ದರು ಎಂದು ಪ್ರದೋಷ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ರೇಣುಕಸ್ವಾಮಿ ಕ್ಷಮೆ ಕೇಳುತ್ತಾ ಕೈಮುಗಿದರೂ ಹಲ್ಲೆ ಮುಂದುವರಿದಿತ್ತು ಎಂದು ಪ್ರದೋಷ್‌ ಹೇಳಿಕೆ ನೀಡಿದ್ದಾರೆ. ದರ್ಶನ್‌ ಹಲವು ಬಾರಿ ಹಲ್ಲೆ ನಡೆಸಿದ್ದು, ಪವಿತ್ರಾಗೌಡ ಕೂಡ ಚಪ್ಪಲಿಯಿಂದ ಹೊಡೆದಿದ್ದರು ಎನ್ನಲಾಗಿದೆ.

ರೇಣುಕಸ್ವಾಮಿ ಕಾಲಿಗೆ ಬಿದ್ದು ಕ್ಷಮೆ ಕೇಳಿದರೂ ಆತನ ಮೇಲೆ ಹಲ್ಲೆ ಮುಂದುವರಿದಿತ್ತು. ಬಳಿಕ ಆತನ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ, ದೇಹದ ಮೇಲೆ ಉಗುಳಿದ ಘಟನೆಗಳನ್ನೂ ಪ್ರದೋಷ್‌ ವಿವರಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page