ಉಚಿತ ದೃಷ್ಟಿ ತಪಾಸಣಾ ಶಿಬಿರ

ರೋಟರಿ ಕ್ಲಬ್ ಕಾರ್ಕಳ ಮತ್ತು ಲಯನ್ಸ್ ಕ್ಲಬ್ ಕಾರ್ಕಳ ಇವರು ಅಲೋಕ ವಿಷನ್ ಪೌಂಡೇಶನ್‌ರವರ ಸಹಯೋಗದೊಂದಿಗೆ ಉಚಿತ ದೃಷ್ಟಿ ತಪಾಸಣಾ ಶಿಬಿರ ಕಾರ್ಯಕ್ರಮವು ಕಾರ್ಕಳದ ರೋಟರಿ ಬಾಲಭವನದಲ್ಲಿ ದಿನಾಂಕ 27-09-2026 ರಂದು ಉದ್ಘಾಟನೆಗೊಂಡು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಿಜೇಂದ್ರ ಕುಮಾರ್, ಕಾರ್ಯದರ್ಶಿ ಉದಯ ಕುಮಾರ್ ಕಡಂಬ, ಲಯನ್ಸ್ ಕ್ಲಬ್ ಅಧ್ಯಕ್ಷ ಆಶಿಶ್ ಶೆಟ್ಟಿ, ಕಾರ್ಯದರ್ಶಿ ಎಡ್ವರ್ಡ್ ಡಿ ಸೋಜ, ಅಲೋಕ ವಿಷನ್ ಪೌಂಡೇಶನ್ ಸಂಸ್ಥೆಯ ನೇತ್ರ ತಜ್ಞೆ ಡಾ. ಅಕ್ಷತಾ ಮತ್ತು ಸಿಬ್ಬಂದಿಗಳು, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್‌ನ ಸದಸ್ಯರುಗಳು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಕಾರ್ಕಳ ನಗರ ಮತ್ತು ಆಸುಪಾಸಿನ ಗ್ರಾಮದ ಸಾರ್ವಜನಿಕರು ಭಾಗವಹಿಸಿ ಈ ತಪಾಸಣಾ ಶಿಬಿರದ ಉಚಿತ ನೇತ್ರ ತಪಾಸಣೆಯ ಪ್ರಯೋಜನವನ್ನು ಪಡೆದರು. ಭಾಗವಹಿಸಿದವರ ಪೈಕಿ ಬಿ.ಪಿ.ಎಲ್ ಕಾರ್ಡ್ ಹೊಂದಿದ ಅರ್ಹ ಶಿಬಿರಾರ್ಥಿಗಳಿಗೆ ಕನ್ನಡಕವನ್ನು ಉಚಿತವಾಗಿ ವಿತರಿಸಲಾಯಿತು.































































































































