25 C
Udupi
Tuesday, September 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 655

ಭರತೇಶ ಶೆಟ್ಟಿ,ಎಕ್ಕಾರು

ಕೌಶಿಕ ಈಗ ಬಹಿರ್ಮುಖನಾಗಿ ಕಣ್ತೆರೆದು ನೋಡುವಂತಾಯಿತು. ಹೀಗಾಗುವುದಕ್ಕೆ ಮೊದಲು ತಪೋನಿರತ ಕೌಶಿಕನ ತಪಸ್ಸನ್ನು ಕೆಡಿಸಲು ಮೇನಕೆ ಪಟ್ಟ ಸಾಹಸ ಅಸಾಮಾನ್ಯವಾದುದು.

ಈ ಮೇನಕೆ ಎಂಬ ಅಪ್ಸರೆಯ ಸೃಷ್ಟಿಯಾದುದೆ ಒಂದು ಮಹತ್ಕಾರ್ಯಕ್ಕಾಗಿ. ಹಿಂದೆ ಅಂಧಕ ಎಂಬ ರಾಕ್ಷಸನ ರಕ್ತವನ್ನು ಕುಡಿಯುವ ಉದ್ದೇಶದಿಂದ ಸೃಷ್ಟಿಯಾದ ದೈವಿಕ ಶಕ್ತಿ ಸಂಭೂತೆ ಅವಳು. ಅಸಾಧಾರಣ ಸೌಂದರ್ಯವತಿ ಅಪ್ಸರೆ ಇಂದ್ರನ ಸೂಚನೆಯಂತೆ ಈ ಹಿಂದೆಯೂ ಅನೇಕ ಋಷಿಗಳನ್ನು ಮೋಹಪಾಶಕ್ಕೊಳಪಡಿಸಿದ ಘಟನೆಗಳಿವೆ. ಅವರ ತಪಸ್ಸನ್ನು ಭಂಗಗೊಳಿಸಿ, ತಪಃ ಶಕ್ತಿಯನ್ನು ನಾಶಗೊಳಿಸುವುದು ಈಕೆಗೆ ಕರಗತವಾದ ವಿದ್ಯೆ. ಅಪ್ಸರೆಯಾದ ಈಕೆ ಅತಿ ಸೌಂದರ್ಯವತಿ, ಚಿರ ಯೌವನೆ. ದೇಹ ಸುಖ ನೀಡುವುದು, ಮನಮೋಹಕ ನೃತ್ಯ ಮಾಡುವುದು, ಸ್ವರ್ಗದ ಅತಿಥಿಗಳನ್ನು ಸತ್ಕರಿಸುವುದು ಇವಳ ವೃತ್ತಿ. ಒಮ್ಮೆ ಈ ಮೇನಕೆ ವಿಶ್ವವಸು ಎಂಬ ಹೆಸರಿನ ಗಂಧರ್ವನನ್ನು ಕೂಡಿ ಗರ್ಭಿಣಿಯಾಗಿದ್ದಳು. ಆ ನಂತರ ಆಕೆ ತನಗೆ ಹುಟ್ಟಿದ ಮಗುವನ್ನು ನದಿಯ ದಡದಲ್ಲಿ ತೊರೆದು ಸ್ವರ್ಗಕ್ಕೆ ಹೋಗಿದ್ದಳು. ಹತ್ತಿರದಲ್ಲಿ ತಪಸ್ಸು ಮಾಡುತ್ತಿದ್ದ ಸ್ಥೂಲಕೇಶ(ದಪ್ಪಕೂದಲಿನ) ಓರ್ವ ಋಷಿ ಆ ಮಗುವನ್ನು ತೆಗೆದುಕೊಂಡು ಹೋಗಿ ಅದನ್ನು ಬೆಳೆಸಿದ್ದನು. ಆ ಹೆಣ್ಣು ಮಗು ಪ್ರಮದ್ವರೆ. ಇಷ್ಟೇ ಅಲ್ಲ ಈ ಮೇನಕೆಯ ಬಗ್ಗೆ ಹೇಳುವುದಾದರೆ ಇನ್ನಷ್ಟು ವಿಚಾರಗಳಿವೆ. ಸಮುದ್ರ ಮಥನಕ್ಕೆ ನಾಂದಿಯಾಗಿದ್ದ ಪುಷ್ಪ ಮಾಲೆಯನ್ನು ಮುನಿ ದೂರ್ವಾಸರಿಗೆ ಸಮರ್ಪಿಸಿದವಳು ಈ ಮೇನಕೆ. ಹೇ ಇಂದ್ರನಂದನ ಅರ್ಜುನಾ! ನಿನ್ನ ಜನನವಾದ ಸಮಯ ದೇವಲೋಕದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಆ ಜನ್ಮೋತ್ಸವದ ಸಮಾರಂಭದ ವೇಳೆ ಇದೇ ಮೇನಕೆ ಹಾಡಿ ನರ್ತಿಸಿದ್ದಳು. ಈ ಮೇನಕೆ ಮುನಿ ಕೌಶಿಕನ ತಪೋಭಂಗಗೊಳಿಸಲು ಸರ್ವಾಂಗ ಸುಂದರಿಯಾಗಿ, ಏಕವಸನೆಯಾಗಿ, ಸುಗಂಧ ಸುಲೇಪಿತೆಯಾಗಿ, ಸುಮ ಮಾಲೆ ಧರಿಸಿ, ಪುರುಷನ ಗಮನ ಸೆಳೆಯುವಷ್ಟು ಮಾತ್ರ ಮೈ ಮುಚ್ಚಿಕೊಂಡು, ಕಾಲ್ಗೆಜ್ಜೆಗಳ ಕಿಂಕಿಣಿ ನಾದಗೈಯುತ್ತಾ, ನೀಳ ಕೇಶರಾಶಿಯನ್ನು ಗಾಳಿಗೆ ಒಡ್ಡಿ ಮಾದಕ ಮೋಹಕ ಭಂಗಿಯಲ್ಲಿ ಕೌಶಿಕನ ಕಣ್ಣೆದುರು ಕಾಣಿಸಿಕೊಂಡಿದ್ದಳು. ಪೂರಕವಾಗಿ ಮನ್ಮಥನೂ ಐದು ಸುಮಬಾಣಗಳನ್ನು ಪ್ರಯೋಗಿಸಿ ಸೂಕ್ತ ವೇದಿಕೆ ನಿರ್ಮಿಸಿ ಕೊಟ್ಟಾಗಿದೆ.

ತತ್ಪರಿಣಾಮವಾಗಿ ಎಚ್ಚೆತ್ತು ಮೇನಕೆಯ ಮೋಹ ಪಾಶ ಬಂಧಿಯಾಗಿ ತಪಸ್ಸನ್ನು ಮರೆತ ಕೌಶಿಕ ಮುನಿ ಪ್ರೇಮ ಭಿಕ್ಷುವಾಗಿ ಮೇನಕೆಯ ದಾಸನಾಗಿದ್ದನು. ಆಕೆಯ ಸುಖದ ಸುಪ್ಪತ್ತಿಗೆಯಲ್ಲಿ ಮೈಮರೆತು ತಾನು ಈ ತನಕ ಸಾಧಿಸಿದ ತಪಶಕ್ತಿಯನ್ನು ಕಳಕೊಂಡನು. ಇವರೀರ್ವರ ಸಂಗಮದ ಕಾರಣದಿಂದ ಒಂದು ಹೆಣ್ಣು ಮಗು ಜನಿಸಿತು. ಮೇನಕೆ ಮಗುವನ್ನು ಜನ್ಮಕ್ಕೆ ಕಾರಣನಾದ ಕೌಶಿಕನ ಕೈಗಿತ್ತು ತನ್ನ ಲೋಕ ಸ್ವರ್ಗವನ್ನೇರಿದಳು. ಆಕೆಯ ಕಾರ್ಯ ಸಾಧನೆಯಾಗಿತ್ತು. ತಪೋ ಭಂಗವಾಗಿದ್ದ ಕಾರಣ ಲೋಕಕ್ಕೆ ತಪೋ ಜ್ವಾಲೆಯ ಉರಿಯಿಂದ ಮುಕ್ತಿ ಒದಗಿ ಕ್ಷೇಮವಾಗಿತ್ತು.

ಕ್ಷಣಿಕ ಸುಖದ ಪ್ರಲೋಭನೆಗೆ ಒಳಗಾಗಿ ತಾನು ಸಾಧಿಸಿದ್ದ ಶಕ್ತಿಯೆಲ್ಲಾ ನಷ್ಟವಾಗಿದ್ದರಿಂದ ಕೌಶಿಕ ಆ ಕುರಿತಾಗಿ ವ್ಯಥೆಗೊಳಗಾಗಿ ಕುಳಿತಿದ್ದನು. ಅಲ್ಲಿಗೆ ಆಗಮಿಸಿದ ನಾರದರಿಂದ ಕರ್ತವ್ಯ ಪ್ರಜ್ಞೆಯ ಕುರಿತಾಗಿ ಜಾಗೃತಿ ಹಾಗೂ ಉಪದೇಶ ಪಡೆದ ಕೌಶಿಕ ಮತ್ತೆ ಸಕಲ ಸಿದ್ಧತೆಗಳನ್ನು ಮಾಡಿ ತಪೋ ನಿರತನಾದನು. ಬಹುಕಾಲ ಉಗ್ರ ತಪಸ್ಸನ್ನಾಚರಿಸುತ್ತಿದ್ದನು. ತಪ ಶಕ್ತಿಯನ್ನು ಸಾಧಿಸುತ್ತಾ ಮಹರ್ಷಿಯಾದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page