24.9 C
Udupi
Thursday, August 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 618

ಭರತೇಶ್ ಶೆಟ್ಟಿ ಎಕ್ಕಾರು

ಅರ್ಜುನನಿಗೆ ಇಷ್ಟು ಹೊತ್ತು ಸುದೀರ್ಘ ತಪಸ್ಸು, ಯೋಗ ಸಾಧನೆಯಿಂದ ತಿಳಿದ ದಿವ್ಯ ಜ್ಞಾನ ತಿಳಿಯಪಡಿಸುತ್ತಿರುವವರು ಮಹರ್ಷಿ ಬಕದಾಲ್ಭ್ಯ ರು. ಚಿರಂಜೀವಿಗಳು ಎಂದು ಹೇಳುತ್ತಿದ್ದವರು ಬದುಕಿದ್ದಕ್ಕಿಂತಲೂ ಅಧಿಕ ಕಾಲ ಯೋಗಿಯಾಗಿ ಯೋಗಶಕ್ತಿಯಿಂದ ಕಲ್ಪಾಂತ್ಯದ ಮಹಾಪ್ರಳಯ ಕಾಲದ ಸಮಸ್ತ ಸೃಷ್ಟಿ ನಾಶವಾದರೂ ಬದುಕುಳಿದವರು. ಸೃಷ್ಟಿಕರ್ತ ಬ್ರಹ್ಮನೇ ಇಪ್ಪತ್ತನಾಲ್ಕು ಬಾರಿ ಅಂತ್ಯ ಕಂಡು ಬದಲಾದರೂ ಈಗಲೂ ಸಶರೀರಿಯಾಗಿ ಸಾಧನೆ ನಿರತರಾದ ಬಕದಾಲ್ಭ್ಯರ ಆಯಸ್ಸು ಎಷ್ಟೆಂದು ಲೆಕ್ಕ ಹಾಕಲು ಹೋದರೆ ಸಂಖ್ಯೆಗಳ ಮೆರವಣಿಗೆಯಾದೀತು. ಅದೆಷ್ಟು ಕೋಟಿ ಕೋಟಿ ವರ್ಷಗಳಾಗುತ್ತವೆಯೊ… ಅಗಣಿತ ಸಂವತ್ಸರಗಳನ್ನು, ಯುಗಗಳನ್ನು, ಮನ್ವಂತರದ ಮನುಗಳನ್ನು, ಇಂದ್ರರನ್ನು ಯಾಕೆ ಇಪ್ಪತ್ತನಾಲ್ಕು ಬ್ರಹ್ಮರನ್ನು ಕಂಡ ಮಹಾನ್ ಮಹಾತ್ಮರು ಈ ಬಕದಾಲ್ಭ್ಯರು. ಅಂತಹ ಮಹಾಯೋಗಿಯ ಜೊತೆ ಸಂವಾದ ಮಾಡುತ್ತಾ ಬ್ರಹ್ಮಜ್ಞಾನದ ವಿಚಾರ ಮಂಥನ ಮಾಡುವ ಭಾಗ್ಯ ದೊರೆತದ್ದು ಅರ್ಜುನನ ಪಾಲಿಗೆ ಮಹಾಯೋಗವೆ ಹೌದು.

ತನ್ನ ಆಯಸ್ಸಿನ ಲೆಕ್ಕಾಚಾರ ಹೇಳುತ್ತಿದ್ದ ಮಹರ್ಷಿ ಬಕದಾಲ್ಭ್ಯರು ತನ್ನ ಅನುಭವ ಮಹಾಸಾಗರವನ್ನು ಬಿಚ್ಚುತ್ತಾ ಅರ್ಜುನನಿಗೆ ಕಲ್ಪಾಂತ್ಯದ ಮಹಪ್ರಳಯದ ಬಗ್ಗೆ ಹೇಳತೊಡಗಿದರು. “ಮಗನೇ! ನಾನು ಹೇಳಿದ ಕಾಲಮಾನದಂತೆ ಒಬ್ಬ ಬ್ರಹ್ಮನ ಅವಧಿ ಮುಗಿಯುವ ಅಂತ್ಯಕ್ಕೆ ಅಂದರೆ ಕಲ್ಪಾಂತ್ಯಕ್ಕೆ ಪ್ರಳಯವಾಗುತ್ತದೆ. ಸಕಲ ಸೃಷ್ಟಿಯೂ ನಾಶವಾಗಿ ಬ್ರಹ್ಮಾಂಡ ಜಲಪ್ರಳಯವಾಗಿ ಎತ್ತ ನೋಡಿದರೂ ಜಲಮಯವಾಗಿರುತ್ತದೆ. ಇಂತಹ ದೃಶ್ಯವನ್ನು ನಾನು ಬಹಳಷ್ಟು ಬಾರಿ ನೋಡಿದ್ದೇನೆ. ಹೀಗೆ ಜಲಪ್ರಳಯವಾದಾಗ ಬಹುಶಾಖೆ ಉಪಶಾಖೆಗಳಿರುವ, ಮತ್ತೂ ಚಿಗುರುತ್ತಲೆ ಇರುವ ಬೃಹತ್ ಆಲದ ಮರವೊಂದು ಗೋಚರಿಸುತ್ತಿತ್ತು. ಆ ಆಲದ ಮರದ ಎಲೆಯೊಂದು ಉದುರಿ ಆವರಿಸಿರುವ ಜಲದ ಮೇಲೆ ಬೀಳುತ್ತಿತ್ತು. ಹಾಗೆ ಎಲೆ ಉದುರಿದ ನಂತರ ಆ ಬೃಹತ್ ಆಲದ ಮರ ಕಾಣದಾಗುತ್ತಿತ್ತು. ನೀರಿನ ಮೇಲೆ ತೇಲುತ್ತಿದ್ದ ಆಲದ ಎಲೆಯನ್ನು ನೋಡಿದರೆ ಅದರಲ್ಲಿ ಸರ್ವಾಂಗ ಸುಂದರವೂ, ಕೋಮಲವೂ ಆದ ಮುದ್ದು ಮಗುವೊಂದು ಮಂದಸ್ಮಿತನಾಗಿ ಮಲಗಿರುತ್ತಿತ್ತು. ಹಾಗೆಯೆ ಮಲಗಿರದೆ ತನ್ನ ಕಾಲನ್ನು ಕೈಗಳಿಂದ ಹಿಡಿದೆತ್ತಿ ಉಂಗುಷ್ಟವನ್ನು ಬಾಯೊಳಗಿರಿಸಿ ಚೀಪುತ್ತಿತ್ತು. ಜೊಲ್ಲು ಸುರಿಸುತ್ತಾ ನಿತ್ಯಾನಂದ ಮಂದಹಾಸ ಬೀರುತ್ತಿದ್ದ ಮಗುವನ್ನು ಪ್ರತಿಯೊಂದು ಕಲ್ಪಾಂತ್ಯವಾಗಿ ಜಲಪ್ರಳಯವಾದಾಗಲೂ ನೋಡುತ್ತಿದ್ದೆನು. ತೇಜಪೂರ್ಣವೂ, ವರ್ಚಸ್ವಿಯೂ, ಪ್ರಭಾಪೂರ್ಣನೂ ಆಗಿ ಸುಶೋಭಿಸುತ್ತಿದ್ದ ಆ ಶಿಶುವನ್ನು ಅತಿ ಸಮೀಪದಲ್ಲಿ ನಿಂತು ನೋಡಿದ್ದೇನೆ. ಎಷ್ಟು ನೋಡಿದರೂ ಮತ್ತಷ್ಟು ನೋಡುತ್ತಲೆ ಇರಬೇಕು ಎಂಬಷ್ಟು ಮನಮೋಹಕ. ಯಾವ ಮೋಹ ಆಸೆಗಳೂ ಇರದ ನನಗೂ ಆ ಮಗುವನ್ನೊಮ್ಮೆ ಮುಟ್ಟಬೇಕು, ಮುದ್ದಿಸಬೇಕು ಎಂದು ಆಸೆಯಾಗುತ್ತಿತ್ತು. ಹಾಗೆಂದು ನಾನು ನಿಂತಲ್ಲಿಂದ ಆಲದೆಲೆಯ ಮೇಲೆ ಮಲಗಿ ನಸುನಗುತ್ತಾ ಕಾಲಬೆರಳು ಚೀಪುತ್ತಿದ್ದ ಆ ಮಗುವಿನ ಬಳಿ ಸಾಗಿದರೆ ನೀರಿನಲ್ಲಿ ತೇಲುತ್ತಾ ಮುಂದೆ ಸಾಗುತ್ತಿತ್ತು. ಕೈಗೆ ಸಿಕ್ಕಿತು ಸಿಕ್ಕಿತು ಎಂದಾಗುವಾಗ ಕೈಯ ಎಟಕಿನಿಂದ ತುಸು ಅಂತರದಲ್ಲಿ ಜಾರಿ ತೇಲುತ್ತಿತ್ತು. ಎಷ್ಟು ಸಮೀಪಕ್ಕೆ ಹೋದರೂ ಆ ಶಿಶುವನ್ನು ಸ್ಪರ್ಶಿಸಲೂ ಸಾಧ್ಯವಾಗಿರಲ್ಲಿಲ್ಲ. ಅದು ಸಾಮಾನ್ಯ ಮಗುವಲ್ಲ ಅದ್ವಿತೀಯ , ಅಪ್ರಮೇಯ ಪರಮ ಶಕ್ತಿಯ ಸ್ವರೂಪ ಎಂದು ಆವಾಗಲೆ ನಾನು ಕಲ್ಪಿಸಿಕೊಂಡಿದ್ದೆ. ಹಾಗಾಗಿ ಒಮ್ಮೆ ನನಗೆ ಸ್ಪರ್ಶಿಸುವ ಭಾಗ್ಯವನ್ನಾದರೂ ಕರುಣಿಸು ಎಂದು ಕೂಗಿ ಕರೆದರೂ, ನನ್ನ ಕರೆಗೆ ಓಗೊಡದೆ ತೇಲಿ ದೂರವಾಗುತ್ತಿತ್ತು. ಹೀಗೆ ಪ್ರತಿಯೊಂದು ಬಾರಿ ಕಲ್ಪಾಂತ್ಯವಾದಾಗಲೂ ಜಲಪ್ರಳಯವಾಗುತ್ತದೆ, ಈ ಮಗು ಕಾಣಿಸುತ್ತದೆ ಎಂಬ ಕಾತರದಿಂದ ಕಾಯುತ್ತಾ ಮಗು ಕಂಡಾಕ್ಷಣ ಒಮ್ಮೆ ಹಿಡಿಯಬೇಕೆಂದು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ. ಆದರೆ ದರುಶನ ಭಾಗ್ಯ ಮಾತ್ರ ದೊರಕುತ್ತಿತ್ತು ಹೊರತು ಅದಕ್ಕಿಂತ ಅಧಿಕವಾದುದೇನೂ ಸಾಧ್ಯವಾಗದೆ ಹೋಗುತ್ತಿತ್ತು. ಒಂದು ಕಲ್ಪಾಂತ್ಯದಿಂದ ಮತ್ತೊಂದು ಕಲ್ಪಾಂತ್ಯವಾದಾಗ ನನ್ನ ಪ್ರಯತ್ನ ಇಮ್ಮಡಿಯಾಗಿ ಶತಾಯಗತಾಯ ಎಂಬಂತೆ ಆ ಮಗುವನ್ನು ಬೆಂಬತ್ತಿ ಜಲರಾಶಿಯಲ್ಲಿ ಓಡುತ್ತಿದ್ದೆ. ಆದರೆ ಎಷ್ಟು ಕಲ್ಪಾಂತ್ಯಗಳಾಗಿ ಜಲಪ್ರಳಯವಾದರೂ ಆ ಆಲದೆಲೆಯ ಮೇಲೆ ಮಲಗಿ ಕಾಲು ಚೀಪುವ ಮಗು ನನ್ನ ಹಿಡಿತಕ್ಕೆ ಸಿಗಲೇ ಇಲ್ಲ. ಆದರೂ ಇಂದಲ್ಲದಿದ್ದರೂ ಎಂದಾದರೂ ಆ ಮಗುವನ್ನು ಪ್ರಯತ್ನದಿಂದ ಹಿಡಿದೇ ಹಿಡಿಯಬೇಕು ಎಂಬ ಛಲ ಅಧಿಕವಾಗುತ್ತಿತ್ತು. ಮಾತ್ರವಲ್ಲ ಆ ಮಗು ನನಗೆ ಸಿಕ್ಕಿಯೆ ಸಿಗುತ್ತದೆ ಎಂಬ ವಿಶ್ವಾಸ ನನ್ನ ಅಂತರಂಗದಲ್ಲಿ ಬಲಯುತವಾಗುತ್ತಾ ಇದೆ. ಇತ್ತೀಚೆಗಂತೂ ಆ ಭಾಗ್ಯ ಸಿದ್ದಿಯಾಗಲಿದೆ ಎಂಬ ಭಾವನೆ ನನ್ನ ಮನದಲ್ಲಿ ದಟ್ಟವಾಗುತ್ತಾ ಕಾತರವನ್ನು ಹೆಚ್ಚಿಸತೊಡಗಿದೆ.”

“ಇಂದು ನೀವು ಆರು ಮಂದಿ ಈ ಸಾಗರದ ಮಧ್ಯಕ್ಕೆ ಬಂದಾಗ ನೀವೆಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಿದೆ. ಐವರು ಮನುಷ್ಯ ಮಾತ್ರರು. ಆದರೆ ನಿಮ್ಮಲ್ಲಿ ಒಬ್ಬ ಪುರುಷೋತ್ತಮನಿದ್ದಾನೆ. ಬಹಳಷ್ಟು ಹೊತ್ತು ನಾನು ಆತನನ್ನು ನೋಡುತ್ತಾ ಇದ್ದೆ. ನೋಡಿ ನನ್ನ ಪೂರ್ವ ಸ್ಮರಣೆಯಿಂದ ಖಚಿತಪಡಿಸಿಕೊಂಡೆ, ಪ್ರತಿ ಬಾರಿ ಪ್ರಳಯವಾದಾಗ ನಾನು ನೋಡುತ್ತಿದ್ದ ಆ ಮಗುವಿನ ಮುಖವೂ, ನಗುವೂ, ತೇಜಸ್ಸೂ, ವರ್ಚಸ್ಸೂ, ಆ ಮಂದಹಾಸವೂ ಹೀಗೆ ಪ್ರತಿಯೊಂದೂ ಪೂರ್ಣ ಸಾಮ್ಯತೆಯನ್ನು ಹೊಂದಿದೆ. ಆ ಮಗುವನ್ನು ಇವನಲ್ಲಿ ಕಂಡಂತಾಗುತ್ತಿದೆ. ಆ ಮಗುವೇ ಇವನಾಗಿರಬೇಕು, ಅಥವಾ ಇವನೇ ಮಗುವಾಗಿರಬೇಕು ಎಂದು ನನಗೆ ವಿಧಿತವಾಗುತ್ತಿದೆ” ಎಂದು ಹೇಳುತ್ತಾ ಬಕದಾಲ್ಭ್ಯರು ಶ್ರೀಕೃಷ್ಣ ಪರಮಾತ್ಮನನ್ನು ಮತ್ತೆ ಏಕಾಗ್ರ ಚಿತ್ತದಿಂದ ನೋಡತೊಡಗಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page