
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ
ಲಾಂಗ್‌ಟರ್ಮ್ ನೀಟ್‌ನ ಎರಡನೇ ಬ್ಯಾಚ್‌ಗೆ ದಾಖಲಾತಿ ಆರಂಭಗೊAಡಿದೆ. ಈ
ತರಬೇತಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ
ಉಚಿತವಾಗಿರಲಿದೆ. ಯಾವೊಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಯೂ ಆರ್ಥಿಕ
ಸಮಸ್ಯೆಯಿಂದಾಗಿ ನೀಟ್ ತರಬೇತಿಯಿಂದ ವಂಚಿತರಾಗಬಾರದು
ಎAಬುದು ಇದರ ಉದ್ದೇಶವಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ (ಪಿಸಿಎಂಬಿ)
ಮುಗಿಸಿ ವೈದ್ಯರಾಗಬೇಕೆಂದು ಕನಸು ಕಾಣುತ್ತಿರುವ ಬಡ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅಪೂರ್ವ ಅವಕಾಶ ಸಿಗಲಿದೆ. ಸೀಮಿತ
ವಿದ್ಯಾರ್ಥಿಗಳ ವಿಶೇಷ ಎರಡನೇ ನೀಟ್ ಬ್ಯಾಚ್ ಇದಾಗಿದ್ದು
ಸೇರಬಯಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಹಾಗೂ ಊಟದ
ಸೌಲಭ್ಯ ಲಭ್ಯವಿದ್ದು ಜೊತೆಗೆ ಕೋಚಿಂಗ್ ಹಾಗೂ ಅಧ್ಯಯನ
ಸಾಮಾಗ್ರಿಗಳು ಸಂಪೂರ್ಣವಾಗಿ ಉಚಿತವಾಗಿರಲಿದೆ. ಆಸಕ್ತರು ಈ
ಕೂಡಲೇ ದೂರವಾಣಿ ಸಂಖ್ಯೆ 7204543688/ 9611474571 ಅಥವಾ
ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಸಂಸ್ಥೆಯ
ಪ್ರಕಟಣೆ ತಿಳಿಸಿದೆ.



















































































