
ಭಾಯಂದರ್: ಚಿಣ್ಣರ ಬಿಂಬ ಭಾಯಂದರ್ ಶಿಬಿರದ ವತಿಯಿಂದ ‘ಭಾಯಂದರ್ ಶಿಬಿರ ಸಾಂಸ್ಕೃತಿಕ ಸ್ಪರ್ಧಾ ಪರ್ವ–2026’ ಕಾರ್ಯಕ್ರಮವು ಆಗಸ್ಟ್ 23ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಭಾಯಂದರ್ ಪೂರ್ವದ ನ್ಯೂ ಸೇಂಟ್ ಆಗ್ನೆಸ್ ಹೈಸ್ಕೂಲ್, ಶಿವಶಕ್ತಿ ನಗರ, ನವಘರ್ ರಸ್ತೆ ಇಲ್ಲಿ ನಡೆಯಲಿದೆ.
ಚಿಣ್ಣರ ಬಿಂಬ ಸಂಸ್ಥೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ಸಾಂಸ್ಕೃತಿಕ ಸ್ಪರ್ಧಾ ಪರ್ವದಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಚಿಣ್ಣರ ಬಿಂಬ ಸಂಸ್ಥೆಯ ಆಡಳಿತ ಮಂಡಳಿ, ಸ್ಥಾಪಕ ಅಧ್ಯಕ್ಷರು, ಅಧ್ಯಕ್ಷರು, ಸಮಿತಿ ಸದಸ್ಯರು ಹಾಗೂ ಮಕ್ಕಳು ಭಾಗವಹಿಸಲಿದ್ದಾರೆ. ಮಕ್ಕಳಲ್ಲಿ ಕಲಾ ಪ್ರತಿಭೆ, ಸಾಂಸ್ಕೃತಿಕ ಅಭಿರುಚಿ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.






















