12ನೇ ತುಳು ಹಾಸ್ಯಮಯ ನಾಟಕ “ಊರು ಬೋಡು, ಪುದರ್ ಬೊಡ್ಚಿ”ಇದರ ಶುಭ ಮುಹೂರ್ತ

ಬೈಲೂರು: ಪ್ರಸನ್ನ ಶೆಟ್ಟಿ ಬೈಲೂರು ಸಾರಥ್ಯದ ಚೈತನ್ಯ ಕಲಾವಿದರು ಬೈಲೂರು ಅವರ 12ನೇ ತುಳು ಹಾಸ್ಯಮಯ ನಾಟಕ “ಊರು ಬೋಡು, ಪುದರ್ ಬೊಡ್ಚಿ”ಇದರ ಶುಭ ಮುಹೂರ್ತ ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನೆರವೇರಿತು.
ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೌಡೂರು ನಾಯರ್ ಬೆಟ್ಟು ಪದ್ಮರಾಜ ಹೆಗ್ಡೆ, ಹರಿಜೀವನ ಹೆಗ್ಡೆ, ಹರೀಶ್ ಶೆಟ್ಟಿ ಸನ್ನಿಧಿ, ಶರತ್ ಉಚ್ಚಿಲ, ಸದಾನಂದ ಸಾಲಿಯಾನ್, ಪ್ರಸಾದ್ ಐಸಿರ ಸೇರಿದಂತೆ ತಂಡದ ಸರ್ವ ಕಲಾವಿದರು ಉಪಸ್ಥಿತರಿದ್ದರು.































































































































