28.9 C
Udupi
Monday, June 29, 2026
spot_img
spot_img
HomeBlogಹೊಸ ಪ್ರತಿಭೆಗಳಿಗೆ ಪ್ರಿಯಾ ಸುದೀಪ್ ಆಹ್ವಾನ; ಕಥೆಗಾರರಿಗೆ ಸುವರ್ಣ ಅವಕಾಶ

ಹೊಸ ಪ್ರತಿಭೆಗಳಿಗೆ ಪ್ರಿಯಾ ಸುದೀಪ್ ಆಹ್ವಾನ; ಕಥೆಗಾರರಿಗೆ ಸುವರ್ಣ ಅವಕಾಶ

ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಇತ್ತೀಚೆಗೆ ತಮ್ಮ ಅಳಿಯ ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ನಿರ್ಮಾಣದ ಮೂಲಕ ಗಮನ ಸೆಳೆದಿದ್ದು ಇದೀಗ ತಮ್ಮ ಅಧಿಕೃತ ಬ್ಯಾನರ್ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಹೊಸ ಪ್ರತಿಭೆಗಳು ಹಾಗೂ ಕಥೆಗಾರರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಉತ್ತಮ ಕಥೆ ಹೊಂದಿದ್ದರೂ ಸೂಕ್ತ ವೇದಿಕೆ ಸಿಗದೆ ಅವಕಾಶ ಕಳೆದುಕೊಳ್ಳುತ್ತಿರುವವರಿಗೆ ತಮ್ಮ ಸಂಸ್ಥೆಯ ಮೂಲಕ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಹೊಸ ಆಲೋಚನೆಗಳು ಮತ್ತು ಮೌಲಿಕ ಕಥೆಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಸಂಸ್ಥೆಯ ಪ್ರಕಟಣೆಯ ಪ್ರಕಾರ, ಭಾವನಾತ್ಮಕವಾಗಿ ಮನಮುಟ್ಟುವ, ಹೊಸತನ ಹೊಂದಿರುವ ಹಾಗೂ ಚಿಂತನೆಗೆ ಪ್ರೇರೇಪಿಸುವ ಕಥೆಗಳನ್ನು ಆಹ್ವಾನಿಸಲಾಗಿದೆ. ಕಥೆ, ಚಿತ್ರಕಥೆ ಅಥವಾ ವಿಭಿನ್ನ ಕಥಾ ಪರಿಕಲ್ಪನೆಗಳನ್ನು ಎಲ್ಲಾ ವಿಭಾಗಗಳಿಂದ ಸ್ವೀಕರಿಸಲಾಗುತ್ತದೆ.

ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಶೀಲತೆಯುಳ್ಳ ಬರಹಗಾರರಿಗೆ ಇದು ಉತ್ತಮ ಅವಕಾಶವಾಗಿದ್ದು, ‘ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಸಂಸ್ಥೆ ಹೇಳಿದೆ.

ಕಥೆ ಸಲ್ಲಿಸಲು ಆಸಕ್ತರು ಅಧಿಕೃತ ವಾಟ್ಸಾಪ್ ಸಂಖ್ಯೆ 6363307434 ಗೆ ಸಂಪರ್ಕಿಸಬಹುದು. ಆದರೆ ಕರೆಗಳಿಗೆ ಅವಕಾಶ ಇಲ್ಲದೆ, ಕೇವಲ ವಾಟ್ಸಾಪ್ ಚಾಟ್ ಮೂಲಕ ಮಾತ್ರ ಸಂಪರ್ಕಿಸಲು ಸೂಚಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page