
ಆತ್ಮೀಯರೇ
ದಿ. ಜೂನ್ 6 ಭಾನುವಾರ ಬೆಳಿಗ್ಗೆ 6.30 ರಿಂದ 8.30 ರ ತನಕ ಸ್ವಚ್ಚ ಬಜಗೋಳಿ ಬ್ರಿಗೇಡ್,ಅಬ್ಬೆoಜಾಲ್ ಫ್ರೆಂಡ್ಸ್ ಕ್ಲಬ್,ಶ್ರೀ ಗಣಪತಿ ಸೇವಾ ಸಮಿತಿ ಬಜಗೋಳಿ, ಮುಡಾರು ಗ್ರಾಮ ಪಂಚಾಯತ್ (ಎಸ್. ಎಲ್. ಆರ್. ಎಮ್. ಘಟಕ ಮುಡಾರು) ಇದರ ಸಹಭಾಗಿತ್ವದಲ್ಲಿ ಮುಡಾರು ಪಂಚಾಯತ್ ನಿಂದ ಮಿಯಾರು ಸೇತುವೆ ತನಕ ಸುಮಾರು 2.5 km ದೂರ ರಸ್ತೆಯ ಎರಡೂ ಬದಿಗಳಲ್ಲಿ ಸ್ವಚ್ಚತಾ ಮಹಾ ಅಭಿಯಾನ ನಡೆಯಿತು.
ಸುಮಾರು 60 ಚೀಲಕ್ಕೂ ಹೆಚ್ಚು ಪ್ಲಾಸ್ಟಿಕ್ ತಾಜ್ಯ ವಸ್ತುಗಳು ಹಾಗೂ 10 ಚೀಲಕ್ಕೂ ಹೆಚ್ಚು ಬಾಟಲಿಗಳನ್ನು ಹೆಕ್ಕಿ (ಒಟ್ಟು ಸುಮಾರು 400 kg ) ಅದನ್ನು ಮುಡಾರು S. L. R. M. ಘಟಕಕ್ಕೆ ವಿಲೇವಾರಿ/ಮರುಬಳಕೆ ಮಾಡಲು ಸ್ಥಳಾoತರಿಸಲಾಯಿತು.


































