
ಜೋಗುಳಬೆಟ್ಟು: ಜೋಗುಳಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಮಕ್ಕಳ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ಕೊಡೆ ಮತ್ತು ಶಾಲಾ ಬ್ಯಾಗ್ಗಳನ್ನು ನೀಡುತ್ತಾ ಬರುತ್ತಿರುವ ಶ್ರೀಧರ್ ದೇವಾಡಿಗ (ಮೂಕಾಂಬಿಕಾ ಎಂಟರ್ಪ್ರೈಸಸ್) ಅವರ ಸೇವೆಯನ್ನು ಶಾಲಾ ವತಿಯಿಂದ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕಿ ರೇಖಾ ಎಂ, ಶ್ರೀಧರ್ ದೇವಾಡಿಗ ಅವರು ಶಾಲೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ ಶಾಲೆಗೆ ಬೆನ್ನೆಲುಬಾಗಿ ನಿಂತಿದ್ದು, ಅವರ ಸಹಕಾರದಿಂದ ಶಾಲೆಗೆ ಅನೇಕ ರೀತಿಯಲ್ಲಿ ನೆರವಾಗಿದೆ. ಕೆಲಸದ ಒತ್ತಡ ಹಾಗೂ ಇತರೆ ಕಾರಣಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೂ, ಮುಂದೆಯೂ ಇದೇ ರೀತಿಯ ಸಹಕಾರ ಶಾಲೆಗೆ ಮುಂದುವರಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಶಾಲೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಮಮತಾ ಬಸಂತ್, ಉಪ ಕಾರ್ಯದರ್ಶಿ ಸುಜಾತ ಶೆಟ್ಟಿ, ಹಿರಿಯ ಸದಸ್ಯೆ ವಾರಿಜ ಪೂಜಾರಿ, ಲತಾ, ಶಾಂತ, ಜಯಲಕ್ಷ್ಮಿ, ಶಾಲಾ ಮಕ್ಕಳು, ಪೋಷಕರು ಹಾಗೂ ಸದಸ್ಯರು ಭಾಗವಹಿಸಿದ್ದರು.


































