ಕಾರ್ಕಳ,ಕಾಪು ಹಾಗೂ ಹೆಬ್ರಿ ತಾಲೂಕು ಬಂಟ ಬಾಂಧವರ ಹೊನಲು ಬೆಳಕಿನ “ಬಂಟರ ಕ್ರೀಡೋತ್ಸವ – 2026”

ಬಂಟರ ಸಂಘ ಪಳ್ಳಿ ನಿಂಜೂರು ವಲಯ (ರಿ.) ಇದರ ವತಿಯಿಂದ ಮೇ 16ರಂದು ಶನಿವಾರ ಸಂಜೆ 5:00 ಯಿಂದ, ಪಳ್ಳಿ ಜೂನಿಯರ್ ಕಾಲೇಜ್ ಮೈದಾನದಲ್ಲಿ, ಬಂಟ ಕ್ರೀಡೋತ್ಸವ – 2026 ನಡೆಯಲಿದೆ
, ಕಾರ್ಕಳ, ಕಾಪು ಮತ್ತು ಹೆಬ್ರಿ ತಾಲೂಕುಗಳ ಆಟಗಾರರು ಆಯಾಯ ತಾಲೂಕು ತಂಡದಲ್ಲಿ ಭಾಗವಹಿಸಬಹುದು. ಆದರೆ, ಒಂದು ತಂಡದ ಎಲ್ಲಾ ಆಟಗಾರರೂ ಒಂದೇ ತಾಲೂಕಿನ ನಿವಾಸಿಗಳಾಗಿರಬೇಕು.
ಇದನ್ನು ಆಧಾರ್ ಕಾರ್ಡ್ ಮೂಲಕ ಪರಿಶೀಲಿಸಲಾಗುತ್ತದೆ. ಎಲ್ಲಾ ಆಟಗಾರರು ಕಡ್ಡಾಯವಾಗಿ ಮೂಲ (Physical) ಆಧಾರ್ ಕಾರ್ಡ್ ತರಬೇಕು.
ವಾಲಿಬಾಲ್ (ಪುರುಷರು)
ಪ್ರಥಮ – ₹15,000 ಹಾಗೂ ಟ್ರೋಫಿ
ದ್ವಿತೀಯ – ₹10,000 ಹಾಗೂ ಟ್ರೋಫಿ
ತ್ರೋಬಾಲ್ (ಮಹಿಳೆಯರು)
ಪ್ರಥಮ – ₹15,000 ಹಾಗೂ ಟ್ರೋಫಿ
ದ್ವಿತೀಯ – ₹10,000 ಹಾಗೂ ಟ್ರೋಫಿ
ಹಗ್ಗಜಗ್ಗಾಟ (ಪುರುಷರು)
ಪ್ರಥಮ – ₹15,000 ಹಾಗೂ ಟ್ರೋಫಿ
ದ್ವಿತೀಯ – ₹10,000 ಹಾಗೂ ಟ್ರೋಫಿ
ಹಗ್ಗಜಗ್ಗಾಟ (ಮಹಿಳೆಯರು)
ಪ್ರಥಮ – ₹15,000 ಹಾಗೂ ಟ್ರೋಫಿ
ದ್ವಿತೀಯ – ₹10,000 ಹಾಗೂ ಟ್ರೋಫಿ
ಭಾಗವಹಿಸಲು ಇಚ್ಛಿಸುವ ತಂಡಗಳ ಅನುಕೂಲಗೋಸ್ಕರ ನೋಂದಾವಣಿಯನ್ನು ಮೇ 16ರ ಶನಿವಾರ ಸಂಜೆ 4:00 ವರೆಗೆ ವಿಸ್ತರಿಸಲಾಗಿದೆ.
























