31.1 C
Udupi
Saturday, May 16, 2026
spot_img
spot_img
HomeBlogಜ್ಞಾನಸುಧಾ: ಮೌಲ್ಯ ಸುಧಾ - 48

ಜ್ಞಾನಸುಧಾ: ಮೌಲ್ಯ ಸುಧಾ – 48

ಧನಾತ್ಮಕ ಆಲೋಚನೆಗಳು ಮತ್ತು ಸಕಾರಾತ್ಮಕ ದೃಷ್ಟಿಕೋನವೇ ಜೀವನದ ದಾರಿದೀಪ: ಡಾ. ಜೀವನ್ ಸಾಬ್ ವಾಲಿಕರ್ ಬಿನ್ನಾಳ್

ಗಣಿತನಗರ: ನಮ್ಮೆಲ್ಲರ ಬದುಕಿನ
ಹೊರತಾಗಿ ಜನಪದವನ್ನು ಪ್ರತ್ಯೇಕಿಸಲು
ಸಾಧ್ಯವಿಲ್ಲ. ಜನಪದರು ನಮ್ಮ ಬದುಕನ್ನು
ತಿದ್ದಿ ತೀಡಿದರು. ಹಾಡಿನ ಮೂಲಕ ನಮ್ಮ
ಬದುಕನ್ನು ತಿದ್ದಿದವರು ಜನಪದರು.
ನಾವೆಲ್ಲರೂ ಒಂದು ಎನ್ನುವ ಭಾವವೇ
ಜನಪದ. ಜನಪದರು ಓದದೆ ಬರೆಯದೆ
ಕಾವ್ಯವನ್ನು ಕಟ್ಟುವ ಸಾಮರ್ಥ್ಯವನ್ನು
ಹೊಂದಿದ್ದರು. ಜನಪದ ಉಳಿದರೆ ನಮ್ಮ
ಕನ್ನಡ ಗಟ್ಟಿಯಾಗಿ ಉಳಿಯುತ್ತದೆ, ನಮ್ಮ
ಸಂಸ್ಕೃತಿ ಉಳಿಯುತ್ತದೆ, ನಮ್ಮ ಮುಂದಿನ
ಪೀಳಿಗೆಗೆ ಜನಪದ ಉಳಿಯಬೇಕು. ಜನಪದ
ಹಸಿರಾಗಲಿ, ಜನಪದ ಉಸಿರಾಗಲಿ, ಜನಪದರ
ಬದುಕು ನಮಗೆ ಆದರ್ಶವಾಗಲಿ. ಎಂದು
ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರಿನ
ಸದಸ್ಯರಾದಂತಹ ಡಾ. ಜೀವನ್ ಸಾಬ್ ವಾಲಿಕರ್
ಬಿನ್ನಾಳ್ ನುಡಿದರು.


ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ
ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ
ಹಾಗೂ ಅಜೆಕಾರ್ ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ,
ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-
48ರಲ್ಲಿ “ಜನಪದ ಸಾಹಿತ್ಯದಲ್ಲಿ ಜೀವನ
ಮೌಲ್ಯಗಳು” ಎಂಬ ವಿಷಯದ ಕುರಿತು
ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಅಜೆಕಾರ್
ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ , ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ
ಪ್ರಾಂಶುಪಾಲರು ದಿನೇಶ್ ಎಂ
ಕೊಡವೂರು, ಉಪಪ್ರಾಂಶುಪಾಲರಾದ
ಸಾಹಿತ್ಯ ಉಪಸ್ಥಿತರಿದ್ದರು. ಪ್ರಥಮ ಪಿ.ಯು.ಸಿ
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಗಾನ್ವಿಕಾ
ಪ್ರಾರ್ಥಿಸಿ, ಆಂಗ್ಲಭಾಷಾ ವಿಭಾಗದ ಉಪನ್ಯಾಸಕಿ
ಕು. ದರ್ಶಿನಿ ಕಾರ್ಯಕ್ರಮವನ್ನು ನಿರೂಪಿಸಿ
ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page