
ಜೇಸಿಐ ಕಾರ್ಕಳ ಮತ್ತು ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇದರ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ವನ್ನು ಕೇರ್ತಾಡಿ ಗುತ್ತು ವೃಷಭ ರಾಜ್ ಕಡಂಬರ ಮನೆಯಲ್ಲಿ ಆಯೋಜಿಸಲಾಯಿತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಾಂತಿ ರಾಜ್ ಜೈನ್ ನಲ್ಲೂರು ಇವರು ಕಾರ್ಯಕ್ರಮ ಉದ್ಘಾಟಿಸಿ. ಇಂದಿನ ಎಲ್ಲಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಜರಗಲಿ ಎಂದು ಶುಭಹಾರೈಸಿದರು.
ಜೇಸಿಐ ಕಾರ್ಕಳದ ಪೂರ್ವ ಅಧ್ಯಕ್ಷರಾದ ವೃಷಭ ರಾಜ್ ಕಡಂಬ ಅವರು ಮಾತನಾಡುತ್ತಾ, ಇಂದಿನ ಕಾರ್ಯಕ್ರಮ ಯಶಸ್ವಿಯಾಗಲಿ, ಎಲ್ಲಾ ಮಕ್ಕಳು ನಿಮ್ಮ ಶಾಲೆಗೆ ಕೀರ್ತಿ ತನ್ನಿ, ನಿಮ್ಮ ಶಾಲೆ ಬೆಳೆಯಲು ಬೇಕಾದ ಅವಕಾಶಗಳನ್ನು ಮಾಡಿಕೊಡಿ ,ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಜೇಸಿ ಅವಿನಾಶ್ ಶೆಟ್ಟಿ ಯವರು ಕೆಸರಲ್ಲಾಡುವ ಎಲ್ಲಾ ಆಟಗಳಲ್ಲಿ ಭಾಗವಹಿಸಿ, ಸಂತೋಷವನ್ನು ಅನುಭವಿಸಿ, ಶಾಲೆಗೆ ಹೆಸರು ತನ್ನಿ, ಸಾಧನೆ ಮಾಡಿ ಎಂದರು.
ಅತ್ಯುತ್ತಮ ಕೃಷಿಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ವಾದಿರಾಜ್ ಶೆಟ್ಟಿಯವರು ಮಾತನಾಡುತ್ತಾ, ಕಾರ್ಕಳದ ಶಿಸ್ತಿನ ಈ ಸಂಸ್ಥೆ ಇಂತಹ ಕಾರ್ಯಕ್ರಮವನ್ನು ನೆರವೇರಿಸುವುದು ತುಂಬಾ ಸಂತೋಷ. ಇಂತಹ ಗದ್ದೆಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುತ್ತಿರುವುದು ಇದೊಂದು ಅತ್ಯುತ್ತಮ ಕಾರ್ಯಕ್ರಮ. ನಾನು ಜೇಸಿಯ ಅಧ್ಯಕ್ಷನಾಗಿದ್ದಕ್ಕೆ ಇವತ್ತು ಸಾರ್ಥಕವಾಗಿದೆ. ನನ್ನನ್ನು ಸನ್ಮಾನಿಸಿದ್ದೀರಿ, ಈ ಸಂಸ್ಥೆ ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಬದುಕುವ ಅಡಿಪಾಯ ಹಾಕುತ್ತಿದೆ. ಇಲ್ಲಿಯ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದರು .
JFS ಸಂತೋಷ್ ಶೆಟ್ಟಿ ಯವರು, ಮಕ್ಕಳಿಗೆ ಕೃಷಿಯ ಮಾಹಿತಿ, ಬೆಳೆಯುವ ಬಗ್ಗೆ, ಇಂತಹ ಕಾರ್ಯಕ್ರಮಗಳ ಮೂಲಕ ತಿಳಿಯುತ್ತದೆ. ರೈತರಿಗೆ ಗೌರವ ಕೊಡಬೇಕು. ಮಣ್ಣಿನೊಂದಿಗೆ ಸಂಬಂಧ ಬೆಳೆದಾಗ ಕೃಷಿಯ ಮಹತ್ವ ತಿಳಿಯುತ್ತದೆ. ಇಂದಿನ ದಿನವನ್ನು ಸರಿಯಾಗಿ ಅನುಭವಿಸಿ. ಪ್ರಕೃತಿಗೆ ಸರಿಯಾದ ವ್ಯಕ್ತಿಗಳಾಗಿ ಎಂದರು.
RPP ಭರತ್ ಆಚಾರ್ಯ ರಾಷ್ಟ್ರಾಧ್ಯಕ್ಷರು ಜೇಸಿಐ ಇಂಡಿಯಾ ಅವರು ದೇಶವಿದೇಶಗಳಲ್ಲಿ ಎಷ್ಟೇ ಓಡಾಡಿದರು ಇದು ನಮ್ಮ ಜಾಗ,ನಮ್ಮ ಊರು, ತುಂಬಾ ಖುಷಿ ಆಗುತ್ತದೆ. ಮತ್ತೆ ಈ ಕಾರ್ಯಕ್ರಮಕ್ಕೆ ಕರೆದರೆ ಬರುತ್ತೇನೆ. ನಾನು ಮಕ್ಕಳೊಂದಿಗೆ ಗದ್ದೆಯಲ್ಲಿ ಆಡಬೇಕು ಎಂಬ ಆಸೆ ಇದೆ. ಇದು ಹೀಗೆ ನಡೆಯಲಿ. ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದ ಅವಾರ್ಡ್ ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಜೇಸಿಐನ ಸದಸ್ಯರು. ಶಾಲಾ ಮುಖ್ಯೋಪಾಧ್ಯಾಯರಾದ ಶಂಕರನ್ ಪಿ ನಂಬೂಧರಿಯವರು ಹಾಗೂ ಶಾಲಾ ಆಡಳಿತ ಅಧಿಕಾರಿ ಪ್ರಣೀತ್ ರವರು ಉಪಸ್ಥಿತರಿದ್ದರು.






















