ನೂತನ ಅಧ್ಯಕ್ಷರಾಗಿ, ವೃಷಭರಾಜ ಕಡಂಬ ಅವಿರೋಧ ಆಯ್ಕೆ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕಾರ್ಕಳ ತಾಲೂಕು ಇದರ ಪ್ರಸ್ತುತ ವರ್ಷದ ಕೊನೆಯ ತ್ರೈಮಾಸಿಕ ಸಭೆಯು ಬಾಹುಬಲಿ ಪ್ರವಚನ ಮಂದಿರದಲ್ಲಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು 2026-27ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಅನುಷ್ಠಾನ, ನವಜೀವನ ಸಮಿತಿ ಬಲವರ್ಧನೆ ಹಾಗೂ ಮದ್ಯವರ್ಜನ ಶಿಬಿರ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ನೂತನ ತಾಲೂಕು ವೇದಿಕೆ ಅಧ್ಯಕ್ಷರಾಗಿ ವೃಷಭರಾಜ ಕಡಂಬ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಕಳ ತಾಲೂಕಿನ ವಲಯ ಮೇಲ್ವಿಚಾರಕರು ತಮ್ಮ ಜನಜಾಗೃತಿ ಸಾಧನಾ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕಮಲಾಕ್ಷ ನಾಯಕ್, ತ್ರಿವಿಕ್ರಮ ಕಿಣಿ, ಹರಿಶ್ಚಂದ್ರ ತೆಂಡುಲ್ಕರ್ ಹಾಗೂ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ವಲಯ ಕಾರ್ಯದರ್ಶಿಗಳಾದ ಗೀತಾ, ಯಶೋಧ, ಸುಶೀಲಾ, ಬ್ರಿಜೇಶ್, ಶಿವರಾಮ್ ಹಾಗೂ ಕಚೇರಿ ಆಡಳಿತ ಪ್ರಬಂಧಕಿ ಸೌಮ್ಯ ಉಪಸ್ಥಿತರಿದ್ದರು.
ಕ್ಷೇತ್ರ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ ಗತ ಸಭೆಯ ವರದಿ ವಾಚಿಸಿದರು. ವಲಯ ಮೇಲ್ವಿಚಾರಕರಾದ ಗಿರೀಶ್ ಸ್ವಾಗತಿಸಿದರು. ದಿನೇಶ್ ವಂದಿಸಿದರು.























