33.4 C
Udupi
Thursday, April 30, 2026
spot_img
spot_img
HomeBlogಆನ್‌ಲೈನ್ ಗೇಮಿಂಗ್‌ಗೆ ಕಟ್ಟುನಿಟ್ಟಿನ ನಿಯಂತ್ರಣ: ಮೇ 1ರಿಂದ ಹೊಸ ನಿಯಮಗಳು ಜಾರಿ

ಆನ್‌ಲೈನ್ ಗೇಮಿಂಗ್‌ಗೆ ಕಟ್ಟುನಿಟ್ಟಿನ ನಿಯಂತ್ರಣ: ಮೇ 1ರಿಂದ ಹೊಸ ನಿಯಮಗಳು ಜಾರಿ

ಹೊಸ ದಿಲ್ಲಿ: ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು 2026ರ ಮೇ 1ರಿಂದ ಹೊಸ ಕಾನೂನು ಚೌಕಟ್ಟು ಜಾರಿಗೆ ತರಲಿದೆ. ಗೇಮಿಂಗ್ ನಿಯಂತ್ರಣ ಕಾಯ್ದೆ–2025ರಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಇ-ಸ್ಪೋರ್ಟ್ಸ್ ಉತ್ತೇಜನದ ಜೊತೆಗೆ ಹಣದ ಜೂಜಾಟವನ್ನು ತಡೆಯುವುದು ಉದ್ದೇಶವಾಗಿದೆ.

ಈ ನಿಯಮಗಳಡಿ “ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ” ಸ್ಥಾಪನೆಯಾಗಿ, ಗೇಮ್‌ಗಳ ವರ್ಗೀಕರಣ, ದೂರುಗಳ ನಿರ್ವಹಣೆ ಹಾಗೂ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಿದೆ. ಪ್ರವೇಶ ಶುಲ್ಕ, ಬಹುಮಾನ ಮಾದರಿ ಆಧರಿಸಿ ಗೇಮ್‌ಗಳನ್ನು ಜೂಜಾಟ, ಇ-ಸ್ಪೋರ್ಟ್ಸ್ ಅಥವಾ ಸಾಮಾಜಿಕ ಆಟಗಳೆಂದು ಗುರುತಿಸಲಾಗುತ್ತದೆ.

ಬಳಕೆದಾರರ ಸುರಕ್ಷತೆಗೆ ವಯೋ ಪರಿಶೀಲನೆ, ಪೋಷಕರ ನಿಯಂತ್ರಣ ಮತ್ತು ಸಮಯ ಮಿತಿ ಕಡ್ಡಾಯವಾಗಲಿದೆ. ದೂರುಗಳಿಗೆ ಹಂತವಾರು ವ್ಯವಸ್ಥೆ ಜಾರಿಯಾಗಿದ್ದು, ಪ್ರತಿ ಹಂತದಲ್ಲಿ 30 ದಿನಗಳಲ್ಲಿ ಪರಿಹಾರ ನೀಡುವ ಗುರಿ ಇರುತ್ತದೆ. ನಿಯಮ ಉಲ್ಲಂಘಿಸಿದ ವೇದಿಕೆಗಳಿಗೆ ಕಠಿಣ ದಂಡ ವಿಧಿಸಲಾಗುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page