24.8 C
Udupi
Tuesday, February 3, 2026
spot_img
spot_img
HomeBlogವಾಹನ ಸವಾರನ ಬಳಿ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ಆತನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದರ್ಥವಲ್ಲ :...

ವಾಹನ ಸವಾರನ ಬಳಿ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ಆತನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದರ್ಥವಲ್ಲ : ಕರ್ನಾಟಕ ಹೈ ಕೋರ್ಟ್ ತೀರ್ಪು

ತುಮಕೂರು: ಕರ್ನಾಟಕ ಹೈ ಕೋರ್ಟ್ ಸುಮಾರು 7 ವರ್ಷದ ಹಿಂದೆ ತುಮಕೂರಿನಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ಹೊರಡಿಸಿದ್ದು ಅದೇನೆಂದರೆ , ವಾಹನ ಸವಾರನ ಬಳಿ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ಆತನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದರ್ಥವಲ್ಲ ಎಂದು ತಿಳಿಸಿದೆ.

ವಾಹನ ಸವಾರನ ಲೈಸೆನ್ಸ್ ರದ್ದಾದ ಎಂಟು ದಿನಗಳೊಳಗೆ ಈ ಅಪಘಾತ ಸಂಭವಸಿದ್ದು, ಈ ಹಿನ್ನೆಲೆ ಸವಾರನಿಗೆ ದಂಡ ವಿಧಿಸಲಾಗಿತ್ತು. ತುಮಕೂರಿನ ಹೊನ್ನವಳ್ಳಿ ಗ್ರಾಮದ ನಿವಾಸಿಯಾದ ರಂಜಿತ್, 2018ರ ಏಪ್ರಿಲ್ 25 ರಂದು ತಿಪಟೂರು- ಹುಲಿಯೂರ್ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿದ್ದರು. ಅವರು ಆರೋಪಿಸುವಂತೆ ಇನ್ನೋರ್ವ ಬೈಕ್ ಸವಾರ ಬಸವರಾಜ್ ಎನ್ನುವವರ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿತ್ತು. ಆಕ್ಸಿಡೆಂಟ್ನಲ್ಲಿ ಗಂಭೀರ ಗಾಯಗೊಂಡಿದ್ದ ರಂಜಿತ್, ತಿಪಟೂರು ಮೋಟಾರ್ ಅಪಘಾತ ಪರಿಹಾರ ನ್ಯಾಯ ಮಂಡಳಿಯ ಮೆಟ್ಟಿಲೇರಿ 15 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿದ್ದರು. ಈ ಹಿನ್ನಲೆ 2021 ಮಾರ್ಚ್ 23ರಂದು ನ್ಯಾಯಮಂಡಳಿಯು ಬಸವರಾಜ್ನ ಡ್ರೈವಿಂಗ್ ಲೈಸೆನ್ಸ್ ರದ್ದಾಗಿದ್ದ ಕಾರಣ ದಂಡ ವಿಧಿಸಿತ್ತು. ವಿಮಾದಾರರಿಗೆ 7 ಪ್ರತಿಶತ ಬಡ್ಡಿಯೊಂದಿಗೆ 6,22,295 ರೂ. ಪರಿಹಾರ ನೀಡುವಂತೆ ಸೂಚಿಸಿತ್ತು. ಇಷ್ಟಕ್ಕೆ ಸಮಾಧಾನ ಪಡದ ರಂಜಿತ್, ಹೆಚ್ಚಿನ ಪರಿಹಾರದ ಆಶಯದಿಂದ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಉಮೇಶ್ ಅಡಿಗಾ ಅವರ ಪೀಠವು ವೆಹಿಕಲ್ ಆ್ಯಕ್ಟ್ ಸೆಕ್ಷನ್ 14ರ ನಿಂಭದನೆಯಡಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮುಗಿದು 30 ದಿನಗಳ ಒಳಗೆ ಪರವಾನಗಿ ನವೀಕರಣಗೊಳ್ಳಬೇಕು. ಅಲ್ಲಿಯವರೆಗೆ ಲೈಸೆನ್ಸ್ ಅನ್ನು ವಿಸ್ತರಿಸಲಾಗುತ್ತದೆ. ಹೀಗಿರುವಾಗ ಬಸವರಾಜ್ನ ಲೈಸೆನ್ಸ್ ರದ್ದಾಗಿ ಕೇವಲ 8 ದಿನಗಳಾಗಿದೆ, ಚಾಲಕನ ಲೈಸೆನ್ಸ್ ರದ್ದಾಗಿ 1 ತಿಂಗಳವರೆಗೆ ಪರವಾನಗಿ ನವೀಕರಣಕ್ಕೆ ಅವಕಾಶವಿದ್ದು, ಈ ವೇಳೆ ಯಾವುದೇ ಅಪಘಾತ ಸಂಭವಿಸಿದಲ್ಲಿ ಚಾಲಕನ ಡಿಎಲ್ ಮೇಲೆ ದಂಡ ವಿಧಿಸುವಂತಿಲ್ಲ ಎಂದು ಹೇಳಿದ್ದಲ್ಲದೆ ಕೇವಲ ಲೈಸೆನ್ಸ್ ರದ್ದಾದ ಮಾತ್ರಕ್ಕೆ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎನ್ನುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಂಜಿತ್ ಕೃಷಿಕನಾಗಿದ್ದು, ತಿಂಗಳಿಗೆ 12,500 ರೂ.ಗಳಿಸುವುದರಿಂದ 6 ಪ್ರತಿಶತ ಬಡ್ಡಿಯೊಂದಿಗೆ ಹೆಚ್ಚಿನ 2,79,000 ರೂ. ಪರಿಹಾರ ನೀಡುವಂತೆ ವಿಮಾದಾರರಿಗೆ ಹೇಳಲಾಯಿತು. ಅದರೊಂದಿಗೆ ಬಸವರಾಜ್ನ ಕುಟುಂಬವಿಟ್ಟಿದ್ದ ಠೇವಣಿ ಹಣವನ್ನು ಹಿಂದಿರುಗಿಸುವಂತೆ ಆದೇಶ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page