
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲಭಾರತೀಯ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ರವರು ಕಾರ್ಕಳದ ಹಿರಿಯ ನ್ಯಾಯವಾದಿ ದಿವಂಗತ ಶ್ರೀ ಎಂ ಕೆ ವಿಜಯ್ ಕುಮಾರ್ ರವರ ಮನೆಗೆ ಭೇಟಿ ನೀಡಿ ಇತ್ತೀಚೆಗೆ ಸ್ವರ್ಗಸ್ಥರಾದ ಎಂ ಕೆ ವಿಜಯ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬಸ್ತರಿಗೆ ಸಾಂತ್ವನ ಹೇಳಿದರು.
ಎಂ ಕೆ ವಿಜಯ್ ಕುಮಾರ್ ರವರ 6 ದಶಕಗಳ ಸುಧೀರ್ಘ ಸಾರ್ವಜನಿಕ ಸೇವೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅದರ ಪರಿವಾರ ಸಂಘಟನೆಗಳ ಜೊತೆಗಿನ ಅವರ ಒಡನಾಟ ,ಸಂಘದ ಚಟುವಟಿಗಳಿಗೆ ಎಂ ಕೆ ವಿಜಯ್ ಕುಮಾರ್ ನೀಡುತಿದ್ದ ಅನನ್ಯ ಪೋಷಣೆ ,ಸಹಾಕಾರ ಸ್ಮರಿಸಿಕೊಂಡರು. ಅದೇ ರೀತಿ ತನ್ನ ಮತ್ತು ಶ್ರೀ ಎಂ ಕೆ ವಿಜಯ್ ಕುಮಾರ್ ರವರ ದಶಕಗಳ ವಯಕ್ತಿಕ ಬಾಂಧವ್ಯವನ್ನು ಮೆಲುಕು ಹಾಕಿಕೊಂಡರು.ಮೇಧಾವಿ ವಕೀಲರಾಗಿ ,ನಿಸ್ವಾರ್ಥ ಸಮಾಜಸೇವಕರಾಗಿ, ಧ್ಯೇಯಬಧ್ದ ಸ್ವಯಂ ಸೇವಕನಾಗಿ ,ಪ್ರಾಮಾಣಿಕ ರಾಜಕೀಯ ಕಾರ್ಯಕರ್ತನಾಗಿ ಮಾಡಿದ
ನಿಸ್ಪ್ರಹ ಸಮಾಜಸೇವೆಗಳನ್ನು ನೆನಪಿಸಿಕೊಂಡರು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹರಾದ ಪ್ರಕಾಶ್ ಪಿ ಎಸ್ ರವರು,ವಿಭಾಗ ಪ್ರಚಾರಕರಾದ ಸುರೇಶ್ ಜೀ ರವರು ಖ್ಯಾತ ನ್ಯಾಯವಾದಿಗಳಾದ ಎಂ ಕೆ ಸುವ್ರತ್ ಕುಮಾರ್ , ಎಂ ಕೆ ವಿಪುಲ್ ತೇಜ್ , ಎಂ ಕೆ ದಿವಿಜೇಂದ್ರ ಕುಮಾರ್ ಶ್ರೀಮತಿ ಶ್ವೆತಾ ಪಾಂಡಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಎಂ ಕೆ ವಿಜಯ್ ಕುಮಾರ್ ಪುತ್ಥಳಿಗೆ ಪುಷ್ಪಾರ್ಚನೆಯನ್ನು ಗೈದು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.






























































































































