
ನವದೆಹಲಿ: ಭಾನುವಾರ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಇಂದು ಪ್ರಧಾನಿ ಕಚೇರಿಗೆ ಆಗಮಿಸಿದ ಬೆನ್ನಲ್ಲೇ ಮೋದಿ ರೈತರ ಖಾತೆಗೆ ಬರೋಬ್ಬರಿ 20,000 ಕೋಟಿ ರೂಪಾಯಿ ಜಮೆ ಮಾಡಿದ್ದಾರೆ. ಕಿಸಾನ್ ನಿಧಿ ಸಮ್ಮಾನ್ 17ನೇ ಕಂತನ್ನು ಮೋದಿ ಬಿಡುಗಡೆ ಮಾಡಿದ್ದು ಬರೋಬ್ಬರಿ 9.3 ಕೋಟಿ ರೈತರ ಖಾತೆಗೆ 20 ಸಾವಿರ ಕೋಟಿ ರೂಪಾಯಿ ಜಮೆ ಮಾಡಿದ್ದಾರೆ.
ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಕಲ್ಯಾಣಕ್ಕಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ರೈತರಗೆ ಹಣ ಬಿಡುಗಡೆ ಮಾಡಿ ಮೋದಿ ಹೇಳಿದ್ದಾರೆ.
ಮೊದಲ ದಿನವೇ ಮೋದಿ ಚುರುಕಿನ ಕೆಲಸಗಳು ಆರಂಭಗೊಂಡಿದ್ದು ಇಂದು ಸಂಜೆ ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆ ನಡೆಯಲಿದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಚಿವರನ್ನೊಳಗೊಳಗೊಂಡ ಸಭೆಯಲ್ಲಿ ಮುಂದಿನ 100 ದಿನಗಳ ಕಾರ್ಯಸೂಚಿ ಕುರಿತು ಚರ್ಚೆಯಾಗಲಿದೆ. ಸರ್ಕಾರದ ಯೋಜನೆಗಳು, ತ್ವರಿತವಾಗಿ ಮುಗಿಸಬೇಕಾದ ಕೆಲಸಗಳ ಕುರಿತು ಈ ಸಭೆಯಲ್ಲಿ ಚರ್ಚೆಯಾಗಲಿದೆ.