
ಮೂರು ವರ್ಷದಿಂದ NEET ಪರೀಕ್ಷೆಗೆ ತಯಾರಿ ನಡೆಸಿ ಮೇ 3ರಂದು ನಡೆದ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿ ಪ್ರದೀಪ್ ಮೇಘವಾಲ್ (22) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯುವಕ ಜೈಪುರದ ಜುಂಜುನು ಜಿಲ್ಲೆಯ ಗುಢಾ ಗೌಜ್ಜಿ ಪ್ರದೇಶದ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಸೀಕರ್ ನಲ್ಲಿ ಇಬ್ಬರು ಸಹೋದರಿಯರ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ.
ಮೇ 3ರಂದು ನಡೆದಿದ್ದ ಪರೀಕ್ಷೆಯಲ್ಲಿ ಪ್ರದೀಪ್ 720 ರಲ್ಲಿ 650ಕ್ಕೂ ಹೆಚ್ಚು, ಅಂಕಗಳು ಬರುವ ನಿರೀಕ್ಷೆಯಿದ್ದು ಪರೀಕ್ಷೆ ರದ್ದಾದ ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದರೂ ಎಂದು ಅವರ ತಂದೆ ರಾಜೇಶ್ ಕುಮಾರ್ ಮೇಘವಾಲ್ ತಿಳಿಸಿದ್ದಾರೆ.























