29 C
Udupi
Monday, October 19, 2026
spot_img
spot_img
HomeBlogರೈಲಿನಲ್ಲಿ ಇಯರ್‌ಫೋನ್ ಇಲ್ಲದೆ ರೀಲ್ಸ್ ನೋಡಿದರೆ, ಸ್ಪೀಕರ್ ಮೋಡ್ ನಲ್ಲಿ ಜೋರಾಗಿ ಮಾತನಾಡಿದರೆ ಬೀಳುತ್ತೆ ದಂಡ...!

ರೈಲಿನಲ್ಲಿ ಇಯರ್‌ಫೋನ್ ಇಲ್ಲದೆ ರೀಲ್ಸ್ ನೋಡಿದರೆ, ಸ್ಪೀಕರ್ ಮೋಡ್ ನಲ್ಲಿ ಜೋರಾಗಿ ಮಾತನಾಡಿದರೆ ಬೀಳುತ್ತೆ ದಂಡ…!

ಮಂಗಳೂರು: ರೈಲುಗಳಲ್ಲಿ ಇಯರ್‌ಫೋನ್‌ಗಳಿಲ್ಲದೆ ರೀಲ್ಸ್ ವೀಕ್ಷಿಸುವುದು, ಆಡಿಯೋ ಪ್ಲೇ ಮಾಡುವುದು ಅಥವಾ ಜೋರಾಗಿ ಫೋನ್‌ನಲ್ಲಿ ಮಾತನಾಡುವುದು ಇನ್ನು ಮುಂದೆ ದುಬಾರಿಯಾಗಬಹುದು. ಇಂತಹ ವರ್ತನೆಯಿಂದ ಸಹಪ್ರಯಾಣಿಕರಿಗೆ ತೊಂದರೆಯಾದರೆ ದಂಡದ ಜೊತೆಗೆ ಜೈಲು ಶಿಕ್ಷೆಯೂ ವಿಧಿಸುವ ಸಾಧ್ಯತೆಯಿದೆ ಎಂದು ಭಾರತೀಯ ರೈಲ್ವೆ ಎಚ್ಚರಿಸಿದೆ.

ರೈಲಿನಲ್ಲಿ ಸ್ಪೀಕರ್ ಮೋಡ್‌ನಲ್ಲಿ ಮಾತನಾಡಿ ಅಥವಾ ಶಬ್ದ ಮಾಡುತ್ತಾ ಇತರರಿಗೆ ಕಿರಿಕಿರಿ ಉಂಟುಮಾಡುವವರಿಗೆ ₹ 1,000 ದಂಡ ವಿಧಿಸುವುದರ ಜೊತೆಗೆ ರೈಲ್ವೆ ಆವರಣದಿಂದ ಹೊರಹಾಕಲು ಅವಕಾಶವಿದೆ.

ಎಚ್ಚರಿಕೆಯ ಬಳಿಕವೂ ಇದೇ ವರ್ತನೆ ಮುಂದುವರಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹ 5,000 ದಂಡ ವಿಧಿಸಬಹುದು ಎಂದು ರೈಲ್ವೆ ತಿಳಿಸಿದೆ.

ಈ ಕ್ರಮವು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 145(2)ಕ್ಕೆ ಸಂಬಂಧಿಸಿದೆ. ಈ ಹಿಂದೆ ಇಂತಹ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದ್ದರೂ, ದಂಡದ ಪ್ರಮಾಣ ಸ್ಪಷ್ಟವಾಗಿರಲಿಲ್ಲ. ಇದೀಗ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯಿದೆ, 2026ರ ಮೂಲಕ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಇಯರ್‌ಫೋನ್ ಬಳಸಿ ವಿಡಿಯೋ ವೀಕ್ಷಿಸುವುದು, ಸಂಗೀತ ಕೇಳುವುದು ಹಾಗೂ ಕರೆ ಮಾಡುವುದು ನಿಷೇಧವಲ್ಲ. ಇತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಳಸಿದರೆ ಯಾವುದೇ ಅಭ್ಯಂತರವಿಲ್ಲ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page