ಯಕ್ಷಗಾನ ವಿಚಾರ, ಕಾರ್ಯಕ್ರಮಕ್ಕೆ ಆಹ್ವಾನಿತರನ್ನಾಗಿಸಲು ಸುತ್ತೋಲೆ ಹೊರಡಿಸಿ: ಬಿಜೆಪಿ ವ್ಯಂಗ್ಯ..

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಕಾರ್ಕಳ ಕಾಂಗ್ರೇಸ್ ಹತಾಶ ಭಾವನೆಯಲ್ಲಿದ್ದು, ಕಾರ್ಕಳದಾಧ್ಯಂತ ನಡೆಯುವ ಸಾಮಾಜಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ತೆರೆಯ ಮರೆಯಲ್ಲಿ ಅಡ್ಡಿಪಡಿಸುತ್ತಾ, ಸಂಘಟಕರಿಗೆ, ಸ್ಥಳೀಯ ಯುವಕರಿಗೆ ತೊಂದರೆ ನೀಡುತ್ತಾ ಆ ನಂತರ ಕಾರ್ಕಳ ಕಾಂಗ್ರೇಸ್‌ನ ಸ್ವಯಂ ಘೋಷಿತ ನಾಯಕ ಅಲ್ಲಿಗೆ ಪ್ರವೇಶಿಸಿಸಲು ಪ್ರಯತ್ನಿಸಿ ಆ ಕಾರ್ಯಕ್ರಮದ ರುವಾರಿ ತಾನೇ ಎಂದು ಪೋಸ್ ನೀಡುತ್ತಿರುವುದು ಕಾರ್ಕಳ ಕಾಂಗ್ರೇಸ್ ಸಧ್ಯದ ಪರಿಸ್ಥಿತಿಯಲ್ಲಿ ಎಷ್ಟು ಹಳ್ಳ ಹಿಡಿದಿದೆ ಎಂದು ತೋರಿಸುತ್ತದೆ. ರಾಜ್ಯಕ್ಕೆ ಮುಖ್ಯಮಂತ್ರಿಯವರನ್ನು ನೀಡಿದ ಕಾರ್ಕಳ ಕಾಂಗ್ರೇಸಿನ ಅಧೋಗತಿ ಎದ್ದು ಕಾಣುತಿದೆ.
ಶಿರ್ಲಾಲಿನಲ್ಲಿ ಇಂತಹದೇ ಒಂದು ಪ್ರಯತ್ನಕ್ಕೆ ಕೈ ಹಾಕಿ ಕರಾವಳಿಯ ಸಂಸ್ಕöÈತಿಯ ಪ್ರತೀಕವಾಗಿದ್ದ ಯಕ್ಷಗಾನ ಪ್ರದರ್ಶನದ ಬಗ್ಗೆ ದ್ವನಿವರ್ಧಕ ಬಳಸಲು ಪರವಾನಿಗೆ ಪಡೆದಿಲ್ಲ ಎಂಬ ಕಾರಣ ಒಡ್ಡಿ ತಡೆ ಮಾಡಲು ಪ್ರಯತ್ನಿಸಿ, ಊರ ಜನರು ಸಿಡಿದೆದ್ದ ಕಾರಣ ಹಿಂಗು ತಿಂದ ಮಂಗನಂತಾಗಿದೆ. ಕಾರ್ಕಳ ಕಾಂಗ್ರೇಸ್ ನ ನಾಯಕರು ಸಾರ್ವಜನಿಕವಾಗಿ ಮಾನಹರಾಜಾದಾಗ ಆ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರ ಪಾತ್ರ ಏನು ಇಲ್ಲ! ಪುರಾವೆ ನೀಡಿ ಎಂದು ಕೇಳುತ್ತಿರುವುದು, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಮೂಡಾ ಹಗರಣದಲ್ಲಿ ನಮ್ಮ ಪಾತ್ರ ಇಲ್ಲ, ಪುರಾವೆ ನೀಡಿ ಎಂದು ಹೇಳಿಕೆ ನೀಡುತ್ತಾ ಗುಟ್ಟಾಗಿ ಸೈಟ್‌ಗಳನ್ನು ಹಿಂತಿರುಗಿಸಿದ ಮುಖ್ಯಮಂತ್ರಿ ಸಿದ್ದಾರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ನಡೆ ನೆನಪಿಸುತ್ತಿದೆ. ಅಜೆಕಾರು ಪೋಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಮಾತಿನ ವಿಡಿಯೋವನ್ನು ಗಮನಿಸಿದರೆ ಅದರಲ್ಲಿ ಕೇಳಿ ಬರುವ ಪಿರ್ಯಾದಿದಾರನ ಮೊಬೈಲ್ ನಂಬ್ರ ನಿಮ್ಮ ಸ್ಥಳೀಯ ನಾಕಯನದ್ದೊ? ಅಲ್ಲವೋ? ಎಂದು ಗೊತ್ತಾಗುತ್ತದೆ. ಕಾಂಗ್ರೇಸ್‌ನ ಸ್ವಯಂ ಘೋಷಿತ ನಾಯಕರುಗಳು ಕಾರ್ಕಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ಅತಿಥಿಯಾಗಿ ಕರೆಯಬೇಕೆನ್ನುವ ಉತ್ಕಟ ಮನೋಭಾವನೆ ಹೊಂದಿದ್ದು, ಈ ಬಗ್ಗೆ ಅವರು ಜನ ಸೇವೆ ಮಾಡಿ ಜನರ ವಿಶ್ವಾಸಗಳಿಸಿ ಕಾರ್ಯಕ್ರಮಕ್ಕೆ ಅಹ್ವಾನಗಿಟ್ಟಿಸಿಕೊಳ್ಳಬೇಕು ವಿನಃ ಕಾರ್ಯಕ್ರಮ ಸಂಘಟಕರಿಗೆ ತೊಂದರೆ ನೀಡಿ ಅಹ್ವಾನ ಪಡೆದುಕೊಳ್ಳುದಲ್ಲ ಪ್ರಸ್ತುತ ಕರ್ನಾಟಕದಲ್ಲಿ ನಿಮ್ಮದೇ ನೇತ್ರತ್ವದ ಸರಕಾರ ಇರುವುದರಿಂದ ಕಾರ್ಕಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮನ್ನು ಖಾಯಂ ಆಹ್ವಾನಿತರನ್ನಾಗಿ ಮಾಡುವ ಬಗ್ಗೆ ಸರಕಾರದ ವತಿಯಿಂದ ಸುತ್ತೋಲೆ ಹೊರಡಿಸಲು ಪ್ರಯತ್ನಿಸಿ. ಜನ ನಿಮ್ಮ ವಿರುದ್ಧ ಈಗಾಗಲೇ ತಿರುಗಿ ಬಿದ್ದಿದ್ದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಕಾರ್ಕಳ ಕಾಂಗ್ರೇಸಿನ ಅವನತಿ ಶತಸಿದ್ದ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















