31.5 C
Udupi
Friday, April 24, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳತ್ವದಲ್ಲಿ, ಕುಕ್ಕುಂದೂರಿನ ತೋಟಗಾರಿಕಾ ಇಲಾಖೆಯಲ್ಲಿ "ಗೋವಿಗಾಗಿ ಮೇವು" ಕಾರ್ಯಕ್ರಮ

ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳತ್ವದಲ್ಲಿ, ಕುಕ್ಕುಂದೂರಿನ ತೋಟಗಾರಿಕಾ ಇಲಾಖೆಯಲ್ಲಿ “ಗೋವಿಗಾಗಿ ಮೇವು” ಕಾರ್ಯಕ್ರಮ

ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಾಳುತ್ವದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ ಮತ್ತು ರೋಟರಾಕ್ಟ್ ಕ್ಲಬ್,ಕಾರ್ಕಳ ಇದರ ಸಹಯೋಗದೊಂದಿಗೆ ಗೋವಿಗಾಗಿ ಮೇವು ಕಾರ್ಯಕ್ರಮ ದಿನಾಂಕ 15 ಸೆಪ್ಟೆಂಬರ್ 2024ರ ಭಾನುವಾರ ಬೆಳಗ್ಗೆ 6.30 ಘಂಟೆಯಿಂದ 9 ಘಂಟೆಯವರೆಗೆ ಕಾರ್ಕಳದ ಕುಕ್ಕುಂದೂರಿನಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ನಡೆಯಿತು.

ಅಂತೆಯೇ ಪ್ರತಿ ಭಾನುವಾರ ನಡೆಯುವ ಈ ಗೋವಿಗಾಗಿ ಮೇವು – ಗೋಗ್ರಾಸ ಸೇವೆ ಯಲ್ಲಿ ಕಾರ್ಕಳ ತಾಲೂಕಿನ ಜಿಲ್ಲೆಯ ಎಲ್ಲಾ ಯುವಕ ಮಂಡಲಗಳು, ಭಜನಾ ಮಂಡಳಿಗಳು, ಮಹಿಳಾ ಮಂಡಳಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಈ ವೊಂದು ಅಭಿಯಾನದಲ್ಲಿ ಭಾಗಿಯಾಗಬೇಕೆಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ವಿನಂತಿಸಿಕೊಂಡಿದೆ.

ಒಟ್ಟು ಎರಡು ಲೋಡ್ ಪಿಕಪ್ ನಲ್ಲಿ ಆಗುವಷ್ಟು ಹಸಿ ಹುಲ್ಲು ಸಂಗ್ರಹಿಸಿದ್ದು, ಕಾರ್ಕಳದ ನಾಗರಬಾವಿಯ ಅಗ್ರಹಾರ ಗೋಶಾಲೆ ಮತ್ತು ಮೂಜೂರಿನ ಅಭಿನಂದನ ಗೋಶಾಲೆಗೆ ಸಮರ್ಪಿಸಲಾಯಿತು.
ಸ್ವಚ್ಛ ಕಾರ್ಕಳ ಬ್ರಿಗೇಡ್,
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು
ರೋಟರಾಕ್ಟ್ ಕ್ಲಬ್ ನ ಒಟ್ಟು 20 ಮಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಾಡಿಮನೆ ಸುರೇಂದ್ರ ನಾಯಕ್ ರವರು ಹುಲ್ಲು ಸಾಗಾಟಕ್ಕೆ ವಾಹನ ಸೌಕಾರ್ಯದಲ್ಲಿ ಸಹಕರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page