
2026ನೇ ಮೇ ನಲ್ಲಿ ನಡೆದ ಸಿ.ಎ ಪರೀಕ್ಷೆಯಲ್ಲಿ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ 2021ನೇ ಬ್ಯಾಚ್ ನ ವಿದ್ಯಾರ್ಥಿ ಪುನೀತ್ ಉತ್ತೀರ್ಣಗೊಂಡ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಎಂದು ಪ್ರಾಂಶುಪಾಲ ಡಾ. ಸುರೇಶ ರೈ ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಕಳದ ಸಿ.ಎ ಪ್ರಭಾತ್ ಕುಮಾರ್ ಇಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ ಪುನೀತ್ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಈ ಸಾಧನೆಗೈದಿದ್ದಾರೆ. ಈ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಮಾದರಿ ಎಂದಿರುವ ಪ್ರಾಂಶುಪಾಲರು ಎಂ.ಪಿ.ಎಂ. ನ ಮುಕುಟಕ್ಕೆ ಇದೊಂದು ಗರಿ ಸೇರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


































