“ನಶೆ ಮುಕ್ತ ಭಾರತ” ಅಭಿಯಾನ ಕಾರ್ಯಕ್ರಮ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಇಂದು ನಶೆ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವಿಷಯದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಲು ಕಾರ್ಕಳ ನಗರ ಪೊಲೀಸ್ ಠಾಣೆಯಿಂದ ಪೊಲೀಸ್ ಸಿಬ್ಬಂದಿಯಾದ ಅರುಣ್ ಕುಮಾರ್ ಆಗಮಿಸಿರುತ್ತಾರೆ. ಇವರು ಮಕ್ಕಳಿಗೆ ನಶೆ ಏರುವ ಯಾವುದೇ ವಸ್ತುಗಳನ್ನು ಸೇವಿಸಬೇಡಿ ಸೇವಿಸಿ ಸುಂದರವಾದ ಜೀವನವನ್ನು ಹಾಗೂ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಮಕ್ಕಳಿಗೆ ಯಾರಿಂದಲೂ ಯಾವುದೇ ತೊಂದರೆಯಾದರೆ 112 ಕರೆ ಮಾಡಿ ಎಂದರು. ಇದೆಲ್ಲವನ್ನು ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಮಾಹಿತಿಯನ್ನು ನೀಡಿದರು.
ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಸ್ವಾಗತಿಸಿದರು. ಇವರು ಮಕ್ಕಳನ್ನು ಉದ್ದೇಶಿಸಿ ಮಾದಕ ವ್ಯಸನವನ್ನು ತ್ಯಜಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬ ಮಾಹಿತಿಯನ್ನು ನೀಡಿದರು ಕೊನೆಯಲ್ಲಿ ಧನ್ಯವಾದ ನೀಡಿದರು.

































