32.6 C
Udupi
Thursday, May 7, 2026
spot_img
spot_img
HomeBlogವರ್ಧಮಾನ ವಿದ್ಯಾ ಸಂಸ್ಥೆಯಲ್ಲಿ, ವಿಶ್ವ ಕ್ಯಾನ್ಸರ್ ದಿನ ಜಾಗೃತಿ ಕಾರ್ಯಕ್ರಮ

ವರ್ಧಮಾನ ವಿದ್ಯಾ ಸಂಸ್ಥೆಯಲ್ಲಿ, ವಿಶ್ವ ಕ್ಯಾನ್ಸರ್ ದಿನ ಜಾಗೃತಿ ಕಾರ್ಯಕ್ರಮ

ಫೆಬ್ರವರಿ 4, 2025 ರಂದು ವರ್ಧಮಾನ ವಿದ್ಯಾ ಸಂಸ್ಥೆ ಯಲ್ಲಿ ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ನಾಟಕವನ್ನು ಪ್ರಸ್ತುತಪಡಿಸಿದರು. ನಾಟಕದ ಮೂಲಕ ಅವರು ಆರೋಗ್ಯಕರ ಜೀವನಶೈಲಿ, ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಮಾನಸಿಕ ಬೆಂಬಲದ ಮಹತ್ವವನ್ನು ಎತ್ತಿಹಿಡಿದರು. ವಿದ್ಯಾರ್ಥಿಗಳ ಮನಮೋಹಕ ಅಭಿನಯಕ್ಕೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘನೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಉದ್ದೇಶ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಪ್ರೇರಣೆಯನ್ನು ಬೆಳಸುವುದಾಗಿತ್ತು. ಶಾಲಾ ಆಡಳಿತ ಮಂಡಳಿ ವಿಶ್ವ ಕ್ಯಾನ್ಸರ್ ದಿನದ ಮಹತ್ವವನ್ನು ವಿವರಿಸುವುದರೊಂದಿಗೆ, ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಕ್ಯಾನ್ಸರ್ ತಡೆಯಲು ಮುಂದಾಗಬೇಕು ಎಂಬ ಸಂದೇಶವನ್ನು ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page