32.6 C
Udupi
Thursday, May 7, 2026
spot_img
spot_img
HomeBlogರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ,

ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ,

ಫೆ. 6 ರಂದು ಕಾರ್ಕಳ ಬಿಜೆಪಿ ವತಿಯಿಂದ “ಬೃಹತ್ ಪ್ರತಿಭಟನೆ

ರಾಜ್ಯ ಸರಕಾರದ ಜನ ವಿರೋಧಿಗಳನ್ನು ಖಂಡಿಸಿ, ಕಾರ್ಕಳ ತಾಲೂಕು ಕಚೇರಿಯ ಮುಂಭಾಗ ಕಾರ್ಕಳ ಬಿಜೆಪಿ ವತಿಯಿಂದ ಫೆಬ್ರವರಿ 6ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯ ಸರಕಾರದ ಬೆಲೆ ಏರಿಕೆ, ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸದ ಹಿನ್ನಲೆ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆಯ ಪ್ರಮುಖ ವಿಷಯವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ , ಎಲ್ಲಾ ವಿಭಾಗದಲ್ಲೂ ಬೆಲೆ ಏರಿಕೆ, ರಸ್ತೆ ನೀರು ಶಾಲಾ ಕಟ್ಟಡ ಅಭಿವೃದ್ಧಿಗೆ ಅನುದಾನವಿಲ್ಲ. ರಾಜ್ಯದಲ್ಲಿ ಮತಾಂಧರ ಅಟ್ಟಹಾಸ ಮತ್ತು ಓಲೈಕೆ, ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಅನುದಾನ ನೀಡದೆ ವಕ್ಫ್ ಮಂಡಳಿಗಳಿಗೆ ಅನುದಾನದ ಕೊಡುಗೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಟ್ಟಡ ಸಾಮಗ್ರಿಗಳ ಪೂರೈಕೆಗೆ ತಡೆ, ಬಡವರ ರೇಷನ್ ಕಾರ್ಡ್ ರದ್ದತಿ, ಹಾಲಿನ ದರ ಏರಿಕೆಯಾದರೂ ರೈತರಿಗೆ ನೀಡಬೇಕಾದ ಸಬ್ಸಿಡಿ ಬಾಕಿ, ಅಕ್ರಮ ಸಕ್ರಮ ಅರ್ಜಿ ತಿರಸ್ಕೃತ, ಕರಾವಳಿ ಭಾಗದಲ್ಲಿ ಒಂದು ಎಕ್ರೆವರೆಗಿನ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ಕಠಿಣಗೊಳಿಸಿ ಬಡ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.ಎಲ್ಲಾ ವ್ಯವಸ್ಥೆಗಳ ವಿರುದ್ಧ ಕಾರ್ಕಳ ತಾಲೂಕು ಕಚೇರಿಯ ಮುಂದೆ ಫೆಬ್ರವರಿ 6ರಂದು ಕಾರ್ಕಳ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page