
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಗೀತಗಾಯನ ಸ್ಪರ್ಧೆಯಲ್ಲಿ ಸಾಣೂರು ವರ್ಧಮಾನ ಪ್ರಾಥಮಿಕ ಶಾಲೆಯ ಕಬ್ ದಳದ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.

ಸೆ. 9ರಂದು ರಂದು ಶ್ರೀ ಕೃಷ್ಣ ಮಠ ರಾಜಾಂಗಣ ಉಡುಪಿಯಲ್ಲಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನೆರವೇರಿತು. ಸ್ಪರ್ಧೆಯಲ್ಲಿ ವರ್ಧಮಾನ ವಿದ್ಯಾಸಂಸ್ಥೆಯ ಕಬ್ ದಳ ವಿದ್ಯಾರ್ಥಿಗಳು ಪ್ರಥಮ ಬಹುಮಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಸ್ಪರ್ಧೆಯಲ್ಲಿ ಮೇಧಾಂಶ್ ಪಡುಮಲೆ, ಆರ್ಯನ್ ಜೈನ್, ಅಮೋಘ್ ಬಾಳಿಗ, ಪ್ರಜ್ಞಾನ್ ಕೋಟ್ಯಾನ್ ದ್ರುವ್ ನಾಯಕ್ ಹಾಗೂ ಹಾರ್ಮೋನಿಯಂ ನಲ್ಲಿ ಅಧಿತ್ ವರ್ಮ ಜೈನ್ ಭಾಗವಹಿಸಿದ್ದರು. ಕಬ್ ಮಾಸ್ಟರ್ ಶ್ರೀಮತಿ ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು. ದಳನಾಯಕರಿಗೆ ಆಯೋಜಿಸಿದ ಗೈಡ್ಸ್ ದಳ ಗೀತ ಗಾಯನ ಸ್ಪರ್ಧೆಯಲ್ಲಿ ವರ್ಧಮಾನ್ ವಿದ್ಯಾಸಂಸ್ಥೆಯ ಸಂಚಾಲಕಿ ಹಾಗೂ ಫ್ಲಾಕ್ ಲೀಡರ್ ಶಶಿಕಲಾ.ಕೆ. ಹೆಗ್ಡೆ ದ್ವಿತೀಯ ಬಹುಮಾನ ಗಳಿಸಿರುತ್ತಾರೆ.













