
ಬೆಂಗಳೂರು: ವಿಪಕ್ಷ ನಾಯಕ ಅಶೋಕ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರವು 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ತಯಾರಿ ಮಾಡ್ಕೊಂಡಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಗ್ಯಾರಂಟಿಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಇದೀಗ ಅಕ್ರಮ ಬಿಪಿಎಲ್ ಪಡಿತರದಾರರಿಗೆ ಚಾಟಿ ಬೀಸಲು ಮುಂದಾಗಿದ್ದು 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗಿದ್ದು ತೆರಿಗೆ ಹೆಚ್ಚಿಸಿದ್ರೂ ಸಂಬಳ ಕೊಡೋಕೆ ಆಗ್ತಿಲ್ಲ. ನಮ್ಮ ರಾಜ್ಯವೂ ಹಿಮಾಚಲದ ಸ್ಥಿತಿ ತಲುಪಿದೆ ಎಂದು ಲೇವಡಿ ಮಾಡಿದ್ದಾರೆ.













