
ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (RRB) 2026ರ ನೇಮಕಾತಿ ಪ್ರಕ್ರಿಯೆಯಡಿ ದೇಶಾದ್ಯಂತ 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ತಾಂತ್ರಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಮೇ 15ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 14ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು SSLC ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ITI ಪೂರೈಸಿರಬೇಕು. ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಪದವೀಧರರೂ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ 18 ರಿಂದ 30 ವರ್ಷಗಳಾಗಿದ್ದು, ಮೀಸಲಾತಿ ವರ್ಗದವರಿಗೆ ಸಡಿಲಿಕೆ ದೊರೆಯಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ CBT-1, CBT-2, CBAT, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಒಳಗೊಂಡಿರುತ್ತದೆ. ಲೋಕೋ ಪೈಲಟ್ ಹುದ್ದೆಗೆ ಉತ್ತಮ ದೃಷ್ಟಿಶಕ್ತಿ ಕಡ್ಡಾಯವಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ವೇತನದೊಂದಿಗೆ ವಿವಿಧ ಭತ್ಯೆಗಳು ಸೇರಿ ತಿಂಗಳಿಗೆ ಸುಮಾರು ₹35 ಸಾವಿರದಿಂದ ₹45 ಸಾವಿರವರೆಗೆ ಸಂಬಳ ದೊರೆಯಲಿದೆ. ಅಭ್ಯರ್ಥಿಗಳು ಸಂಬಂಧಿತ RRB ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.





















