ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ಅಭಿಯಾನದ ಹೆಸರು… ಶಿಕ್ಷಣ ಸಚಿವರ ಪ್ರತಿಕ್ರಿಯೆ…?

ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಗೆಳತಿಯರೊಂದಿಗೆ ಹಾರೋಣ ಅಭಿಯಾನಕ್ಕೆ ಇಂದು ವಿಧಾನಸೌಧದಲ್ಲಿರುವ ಶಿಕ್ಷಣ ಸಚಿವರ ಕೊಠಡಿಯಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ಈ ಕಾರ್ಯಕ್ರಮದ ಹೆಸರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.
ಸ್ವತಾಲಿಮ್ ಪೌಂಡೇಶನ್ ಸಹಯೋಗದಲ್ಲಿ ಸಹೇಲಿ ಕಿ ಉಡಾನ್ ಅಥವಾ ಫ್ಲೈಯಿಂಗ್ ವಿತ್ ಫ್ರೆಂಡ್ಸ್ ಎಂಬ ಹೆಸರಿನ ಅಭಿಯಾನವನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಗೆಳತಿಯ ರೊಂದಿಗೆ ಹಾರೋಣ ಎಂದು ಹೆಸರು ಇರಿಸಲಾಗಿದೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಾನು ಟ್ರೋಲರ್ಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಸಾಹೇಲಿ ಕಿ ಉಡಾನ್ ಅಥವಾ ಫ್ಲೈಯಿಂಗ್ ವಿತ್ ಫ್ರೆಂಡ್ಸ್ ಎಂಬ ಹೆಸರನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಗೆಳತಿಯರೊಂದಿಗೆ ಹಾಡೋಣ ಗೆಳತಿಯರೊಂದಿಗೆ ನಲಿಯೋಣ ಗೆಳತಿಯರೊಂದಿಗೆ ಆಡೋಣ ಹೀಗೆ ಹಲವು ಹೆಸರುಗಳನ್ನು ಸೂಚಿಸಲಾಗಿದ್ದು, ಅಂತಿಮವಾಗಿ ಗೆಳತಿಯರೊಂದಿಗೆ ಹಾರೋಣ ಎಂಬ ಹೆಸರು ಅಂತಿಮಗೊಂಡಿದೆ. ನಾವು ಮಕ್ಕಳಿಗೆ ಒಳ್ಳೆಯದನ್ನೇ ಕೊಟ್ಟಿದ್ದೇವೆ ಎಂಬ ವಿಷಯ ಮಾತ್ರ ಇಲ್ಲಿ ಮುಖ್ಯವಾಗಿರುತ್ತದೆ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.



















